ನೂತನ ಬಜೆಟ್: ಕಾಂಗ್ರೆಸ್ ಕಾರ್ಯಕ್ರಮ ಬದಲಾವಣೆಯಿಲ್ಲ ಎಂದ ಡಿಸಿಎಂ
ನಿಗಮ, ಮಂಡಳಿ ಚರ್ಚೆ: ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಪಟ್ಟಿ ಸಿದ್ಧಗೊಳ್ಳುತ್ತಿದೆ. ಮೈತ್ರಿ ಸರಕಾರದ ಬಗ್ಗೆ ಸಿದ್ದರಾಮಯ್ಯನವರಿಗೆ ಅಸಮಧಾನ ಇರುವ ಬಗ್ಗೆ ತಮಗೇನೂ ಗೊತ್ತಿಲ್ಲ. ಅಸಮಧಾನ ಇದ್ದರೆ ನನಗೆ ಹೇಳುತ್ತಾರೆ ಎಂದರು. ರಾಜ್ಯದ ರೈತರ ಸಾಲ ಮನ್ನಾಕ್ಕೆ ಕಾಂಗ್ರೆಸ್ ಯಾವತ್ತು ವಿರೋಧ ಮಾಡಿಲ್ಲ. ಕುಮಾರಸ್ವಾಮಿಯವರು ಪ್ರಧಾನಿ ಬಳಿ 50 ಸಾವಿರ ಕೋಟಿ ಸಹಾಯ ಕೇಳಿದ್ದಾರೆ ಎಂದು ಡಾ.ಜಿ.ಪರಮೇಶ್ವರ ಹೇಳಿದ್ದಾರೆ.