ನಿಮ್ಮ ಮನೆಗೆ ಸುಖ ಶಾಂತಿ ತರಲು ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು

ಮಂಗಳವಾರ, 4 ಫೆಬ್ರವರಿ 2014 (14:04 IST)
PR
ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.

2. ನಿಮ್ಮ ಮಲಗುವ ಕೋಣೆಯಲ್ಲಿ ಟೆಲಿವಿಷನ್ ಸೆಟ್ ಇಡಬಾರದು. ಆ ಅಭ್ಯಾಸ ಬಿಡಲಾಗದಿದ್ದರೆ ಟಿವಿ ವೀಕ್ಷಿಸಿದ ಬಳಿಕ ಪ್ಲಾಸ್ಟಿಕ್ ಟೇಬಲ್ ಕ್ಲಾತ್‌ನಿಂದ ಅದನ್ನು ಮುಚ್ಚಿರಿ.

3. ನಿಮ್ಮ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿಯಿರಬಾರದು. ಹಾಸಿಗೆಎದುರು ಕನ್ನಡಿಯಿದ್ದರೆ ಮ‌ೂರನೇ ವ್ಯಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ನಿಮ್ಮ ಇಷ್ಟಬಂದ ಕಡೆ ಕನ್ನಡಿಗಳನ್ನು ಇಡಬೇಡಿ.

4.ನಿಮ್ಮ ಮನೆಯಲ್ಲಿ ಒಳಾಂಗಣ ನೀರಿನ ಚಿಲುಮೆಯನ್ನು ಇಡಿ. ನಿಮ್ಮ ಜೀವನಕ್ಕೆ ಬೇಕಾದ್ದೆಲ್ಲ ಸಿಗಲು ಅನುಕೂಲಕರ ಸ್ಥಳದಲ್ಲಿಡಿ.

5 ಮನೆಯೊಳಗೆ ಈಗಾಗಲೇ ಮೀನಿನ ಟ್ಯಾಂಕ್ ಇದ್ದರೆ ಎಚ್ಚರವಾಗಿರಿ. ನಿಮ್ಮ ಮೀನಿನ ಟ್ಯಾಂಕ್ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾಗಿದ್ದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ, ನಿಮಗೆ ಕಾನೂನಿನ ದಾವೆಗಳು, ದಿವಾಳಿ, ಕೆಲಸದ ಒತ್ತಡ, ತೊಂದರೆಗಳು, ಸಮಸ್ಯೆಗಳು ಉದ್ಭವಿಸಬಹುದು. ಮೀನಿನ ಟ್ಯಾಂಕ್ ನಾಲ್ಕು ತಿಂಗಳವರೆಗೆ ಇರಿಸಿದ ಬಳಿಕ ಮೇಲಿನ ಯಾವುದನ್ನಾದರೂ ಗಮನಿಸಿದರೆ, ನಿಮ್ಮ ಮೀನಿನ ಟ್ಯಾಂಕನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿ.

PR
6. ಅಡುಗೆಮನೆಯಲ್ಲಿ ಸ್ಟವ್‌ಗೆ ಎದುರಾಗಿ ರೆಫ್ರಿಜಿರೇಟರ್, ವಾಷಿಂಗ್ ಮೆಷಿನ್, ವಾಷ್‌ಬೇಸಿನ್ ಮತ್ತು ಟಾಯ್ಲೆಟ್ ಇರದಂತೆ ಖಾತರಿ ಮಾಡಿ. ಬೆಂಕಿ ಮತ್ತು ನೀರಿನ ನಡುವೆ ಸಂಘರ್ಷದಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.

7. ಮಕ್ಕಳಿಗೆ ನೆಲದಲ್ಲಿರುವ ಚಾಪೆಯ ಮೇಲೆ ಮಲಗಲು ಅವಕಾಶ ಕೊಡಬೇಡಿ. ಇದರಿಂದ ಮಕ್ಕಳು ಮಂಚದ ಮೇಲಿನಿಂದ ಬೀಳದಿದ್ದರೂ, ಆಗಾಗ್ಗೆ ಅಸ್ವಸ್ಥತೆಗೆ ದಾರಿ ಕಲ್ಪಿಸುತ್ತದೆ. ಕಾರಣವೇನೆಂದರೆ ಹಾಸಿಗೆಯ ಕೆಳಗೆ ಶಕ್ತಿಸಂಚಲನ ಸಾಧ್ಯವಾಗುವುದಿಲ್ಲ. ಮಕ್ಕಳು ಮಲಗುವ ಹಾಸಿಗೆಯ ಸುತ್ತ ಶಕ್ತಿಯ ಚಲನೆಯಾಗುತ್ತಿದ್ದರೆ ಅವರು ಆರೋಗ್ಯದಿಂದಿರುತ್ತಾರೆ.

8. ನಿಮ್ಮ ಹಾಸಿಗೆಯನ್ನು ಗಟ್ಟಿಯಾದ ಗೋಡೆಗೆ ತಾಗಿಸಿ ಇರಿಸಬೇಕು. ಗಟ್ಟಿಯಾದ ಗೋಡೆಯಿದ್ದರೆ ನೀವು ಆಳವಾದ ನಿದ್ರೆಗೆ ಜಾರಬಹುದು ಮತ್ತು ಬೆಳಿಗ್ಗೆ ಏಳುವಾಗ ನೀವು ಪೂರ್ಣ ವಿಶ್ರಾಂತಿ ಪಡೆದು ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ.

9.ನಿಮ್ಮ ಹಾಸಿಗೆಯ ಮೇಲಿನಿಂದ ಬೆಳಕು ಬೀಳಬಾರದು. ಬೆಳಕು ಶಕ್ತಿಯ ಮೇಲೆ ಒತ್ತಡ ಹಾಕುವುದರಿಂದ ಜೀವನದಲ್ಲೂ ಒತ್ತಡಗಳು ಉಂಟಾಗುತ್ತದೆ.

10. ಅಮೃತಶಿಲೆಯ ಮೇಜು ನಿಮ್ಮ ಊಟದ ಕೋಣೆಯಲ್ಲಿದ್ದರೆ ಕೆಲಸದ ಒತ್ತಡ ಜಾಸ್ತಿಯಿರುತ್ತದೆ. ಅದನ್ನು ಬದಲಾಯಿಸಿ ಮರದ ಮೇಜನ್ನು ಇರಿಸಿ.

PR
11. ನಿಮ್ಮ ಮಗು ಮಲಗುವ ಕೋಣೆಯಲ್ಲಿ ಅಸ್ವಸ್ಥತೆಗೆ ಗುರಿಯಾದರೆ ಇನ್ನೊಂದು ಕೋಣೆಗೆ ಮಗುವನ್ನು ಬದಲಾಯಿಸಿ ಅಥವಾ 6 ರಾಡ್‌ಗಳ ಲೋಹದ ವಿಂಡ್ ಚೈಮ್ ಕೋಣೆಯಲ್ಲಿ ನೇತುಹಾಕಿ. ಇದು ಕೋಣೆಯ ಸರ್ವ ಭೂಶಕ್ತಿಗಳನ್ನು ಒಡೆಯುತ್ತದೆ.

ವೆಬ್ದುನಿಯಾವನ್ನು ಓದಿ