ಕರೀನಾ ಕಪೂರ್ ಬಾಲಿವುಡ್ನ ಹಾಟ್ ತಾರೆ. ಆಕೆ ಹುಟ್ಟಿದ್ದು 1980 ಸೆಪ್ಟೆಂಬರ್ 21ರಂದು. ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟಿಯಲ್ಲಿ ಕರೀನಾಳ ಸ್ಥಾನವೂ ಇದೆ. ಜಬ್ ವಿ ಮೆಟ್ ಎಂಬ ಹಿಟ್ ಚಿತ್ರದ ಪಾತ್ರಕ್ಕೆ ಕರೀನಾ ಫಿಲಂ ಫೇರ್ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದಾಳೆ. ರೆಫ್ಯೂಜಿಯಿಂದ ಕೆರೆಯರ್ ಆರಂಭಿಸಿದರೂ ಅದೇನೂ ಹಿಟ್ ಚಿತ್ರ ಅಂತ ಅನಿಸಲಿಲ್ಲ. ನಂತರ ಮುಜೆ ಕುಚ್ ಕೆಹೆನಾ ಹೆ ಹಿಟ್ ಆಯಿತು. ನಂತರ, ಚಮೇಲಿ, ದೇವ್, ಅಶೋಕಾ, ಓಂಕಾರಾಗಳ ಮೂಲಕ ಪ್ರಸಿದ್ಧಿ ಪಡೆದಳು. ಆದರೆ ಜಬ್ ವಿ ಮೆಟ್ ಆಕೆಯನ್ನು ಯಶಸ್ಸಿನ ತುದಿಗೇರಿಸಿ ಬಾಲಿವುಡ್ಡಿಗೆ ಬಾಲಿವುಡ್ಡನ್ನೇ ಆಳುವಂತೆ ಮಾಡಿತು.
ಕರೀನಾರದ್ದು ಕನ್ಯಾ ರಾಶಿ. ಅವಳ ಜನ್ಮಸಂಖ್ಯೆ 3. ಅದೃಷ್ಟ ದಿನಗಳು ಮಂಗಳವಾರ, ಗುರವಾರ ಹಾಗೂ ಶುಕ್ರವಾರಗಳು. ಗುರು ಗ್ರಹ ಈ ಸಂಖ್ಯೆಯನ್ನು ಆಳುತ್ತದೆ. ಕಷ್ಟಪಟ್ಟು ಕೆಲಸ ಮಾಡುತ್ತಲೇ ಇದ್ದರೆ ಕರೀನಾಗೆ ಪ್ರತಿಫಲ ಸಿಗುತ್ತದೆ. 21ನೇ ತಾರೀಕಿನಂದು ಹುಟ್ಟಿದವರಿಗೆ ಅದೃಷ್ಟ ಮಾತ್ರ ಬೆನ್ನಿಗೇ ಇರುತ್ತದೆ. ಹಾಗಾಗಿ ಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಅಲ್ಲದೆ ಕರೀನಾ ತುಂಬ ಪ್ರತಿಭಾವಂತೆ. ಜತೆಗೆ ಆತ್ಮವಿಶ್ವಾಸಿಯೂ ಕೂಡಾ.
ಆಕೆಯ ವೃತ್ತಿಜೀವನವೂ ಈ ವರ್ಷ ಸೊಗಸಾಗೇ ಇರುತ್ತದೆ. ಆದರೆ ಖಾಸಗಿ ಜೀವನ ಮಾತ್ರ ಸ್ವಲ್ಪ ತತ್ತರಿಸಬಹುದು. ಆಕೆಯ ಪ್ರೇಮವೂ ಅಂತ್ಯವಾಗುವ ಸಂಭವವಿದೆ. ಸೈಫ್ ಆಲಿ ಖಾನ್ ಜತೆಗೆ ಸದ್ಯ ಅಫೇರ್ ಇಟ್ಟುಕೊಂಡಿರುವ ಈಕೆಗೆ ಕೆಲವು ತೊಂದರೆಗಳೂ ಎದುರಾಗಬಹುದು. ಕನ್ಯಾರಾಶಿಯಾದ್ದರಿಂದ ಪರಿಪೂರ್ಣತೆಯನ್ನು ಆಕೆ ಬಯಸುತ್ತಾಳೆ. ಹಾಗಾಗಿ ಆಗಾಗ ಆಕೆಯ ಮೂಡ್ ಕೂಡಾ ಕೈಕೊಡುವ ಸಾಧ್ಯತೆ ಇದೆ. ಕೆಲವು ಅಡೆತಡೆಗಳು ಬಂದರೂ ವರ್ಷಾಂತ್ಯದಲ್ಲಿ ಆಕೆಗೆ ಉತ್ತಮ ಸಂತೋಷದಾಯಕ ಕುಟುಂಬ ಸಂತೃಪ್ತಿ ದೊರೆಯಲಿದೆ.