ವರುಣ್ ಗಾಂಧಿ ರಾಜಕೀಯ ಬಲಾಬಲ

PTI
ಗಾಂಧಿ ಪರಿವಾರದ ಹಾಗೂ ಬಿಜೆಪಿಯ ಸಂಸದೆ ಮೇನಕಾ ಗಾಂಧಿಯ ಏಕಮಾತ್ರ ಪುತ್ರ ವಿವಾದಿತ ವರುಣ್ ಗಾಂಧಿ ಫಿಲಿಬಿತ್ ಕ್ಷೇತ್ರದಿಂದ ಲೋಕಸಭಾ ಕಣದಲ್ಲಿದ್ದಾರೆ.

ವರುಣ್ ಗಾಂಧಿ ಅವರ ಕುಂಡಲಿಯ ದ್ವಿತೀಯ ಭಾವದಲ್ಲಿ ಅಷ್ಟಮೇಶ ಸೂರ್ಯ ಬಾಗ್ಯೇಷ ಷಷ್ಟೇಶ ಬುಧನ ಜತೆಗೆ ಕೇತು ವಿರಾಜಮಾನನಾಗಿದ್ದಾನೆ. ದ್ವಿತೀಯ ಭಾವದಲ್ಲಿ ಕೇತು ವಿರಾಜಮಾನನಾಗುವುದು ಅತ್ಯಂತ ಪ್ರಭಾವ ಶಾಲಿ ಸ್ಥಿತಿ. ಇಂತಹ ಜಾತಕವಿರುವವರಲ್ಲಿ ಭಾರೀ ಸಾಮರ್ಥ್ಯವಿರುತ್ತದೆ.

ಅಲ್ಲದೆ ದಶಮೇಶ ಶುಕ್ರ ಕೇತುವಿನ ನಕ್ಷತ್ರ ಅಶ್ವಿನಿಯಲ್ಲಿದ್ದು ಚತುರ್ಥ ಭಾವದಲ್ಲಿದೆ. ಈ ಸ್ಥಿತಿಯಲ್ಲಿ ಹಿಂದುತ್ವದ ವಿಷಯವ್ನೇ ಬಂಡವಾಳವನ್ನಾಗಿಸಿರುವ ವ್ಯಕ್ತಿ ತನ್ನ ಪ್ರಭಾವವನ್ನು ಬೀರುತ್ತಾನೆ. ಅಲ್ಲದೆ ಇದರಿಂದ ಬಿಜೆಪಿಗೂ ಲಾಭವಾಗಲಿದೆ. ಅಲ್ಲದೆ ವರುಣ್ ಅವರ ಕುಂಡಲಿಯಲ್ಲಿ ರಾಜಯೋಗವೂ ಢಾಳಾಗಿ ಕಾಣುತ್ತದೆ. ರಾಜಯೋಗ ಹೆಚ್ಚು ಸ್ಪಷ್ಟವಾಗಿರುವುದರಿಂದ, ಇಂತಹ ವ್ಯಕ್ತಿ ಬಹುಬೇಗ ಮೇಲಕ್ಕೆ ಬರುತ್ತಾನೆ. ವರ್ತಮಾನದ ತಾರೆಗಳ ಚಲನೆ ಗಮನಿಸಿದರೂ ವರುಣ್‌ಗೆ ಯಾವುದೇ ಹಾನಿ ಗೋಚರಿಸುವುದಿಲ್ಲ. ಬದಲಾಗಿ ಲಾಭವೇ ಕಾಣುತ್ತದೆ.

ವೆಬ್ದುನಿಯಾವನ್ನು ಓದಿ