ಉತ್ತಪ್ಪಗೆ ಭವಿಷ್ಯ ಸುಗಮ

PTI
ಕೊಡಗಿನ ಕ್ರಿಕೆಟ್ ವೀರ ರಾಬಿನ್ ಉತ್ತಪ್ಪ ಹುಟ್ಟಿದ್ದು 1985ರ ನವೆಂಬರ್ 11ರಂದು. ಅವರ ಅದೃಷ್ಟ ಸಂಖ್ಯೆಗಳು 2, 7 ಹಾಗೂ 9. ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ ಗೆಲುವಿನಲ್ಲಿ ರಾಬಿನ್ ಉತ್ತಪ್ಪ ವಹಿಸಿದ್ದ ಪ್ರಮುಖ ಪಾತ್ರ ಸ್ಮರಣೀಯ. ಕ್ರೀಡಾಂಗಣದಲ್ಲಿ ಕೆಲ ಸಮಯದವರೆಗೆ ತಾಳ್ಮೆಯಿಂದ ಆಡುವ ಉತ್ತಪ್ಪ ಅವಶ್ಯ ಸಂದರ್ಭದಲ್ಲಿ ಸಿಂಹದ ಮರಿಯಂತೆ ಹೋರಾಡಬಲ್ಲರು.

ಮಾನಸಿಕ ಸ್ಥೈರ್ಯ, ಕ್ರಿಯಾಶೀಲತೆ, ದೇಹದಾರ್ಢ್ಯ, ಛಲ ಮತ್ತು ಅರ್ಪಣಾ ಮನೋಭಾವದೊಂದಿಗೆ ಇವರು ಈರ್ಷೆ ದ್ವೇಷಗಳಿಂದ ಎದುರಾಳಿಗಳನ್ನು ತೆಗಳುವುದಿಲ್ಲ. ಹೋರಾಟ ಮತ್ತು ಸಹಆಟಗಾರರನ್ನು ಎರಡು ಕಣ್ಣುಗಳೆಂದು ಪರಿಗಣಿಸುವ ಉತ್ತಪ್ಪ ಅವರಿಗೆ ಕಟ್ಟು ಭಾದ್ಯತೆಗಳೆಂದರೆ ಆಗದು. ವ್ಯರ್ಥ ಕಾರ್ಯಗಳಲ್ಲಿ ತೊಡಗುವುದು ಅವರಿಗೆ ಇಷ್ಟವಾಗುವುದಿಲ್ಲ.

ಈ ಗುಣ ಲಕ್ಷಣಗಳು ಉತ್ತಪ್ಪರಿಗೆ ಮಾತ್ರವಲ್ಲ. ನವೆಂಬರ್ 11 ರಂದು ಹುಟ್ಟಿದ ಪ್ರತಿಯೊಬ್ಬರಿಗೆ ಇರುತ್ತವೆ. ಯಾವುದೇ ಕ್ಷಣದಲ್ಲೂ ಆಲಸ್ಯದಿಂದ ಕಾಲ ಕಳೆಯಲಾರರು. ಉತ್ತಪ್ಪ ಅವರಿಗೆ ಕ್ರಿಕೆಟ್ ಜೀವನದ್ಲಲಿ ಇನ್ನೂ ಉತ್ತಮ ಫಲಗಳು ಲಭ್ಯವಾಗಲಿವೆ. ಕೆಲವು ಸಣ್ಣಪುಟ್ಟ ಅಡತಡೆಗಳು ವರ್ಷದಲ್ಲಿ ಕೆಲವು ಕಾಲ ಬಂದರೂ ಉತ್ತಪ್ಪ ಅವರ ಮಾನಸಿಕ ಸ್ಥೈರ್ಯದಂತಹ ಗುಣಗಳೇ ಅವರಿಗೆ ಆ ಸಮಯದಲ್ಲಿ ಸಾಥ್ ನೀಡಬಲ್ಲುದು.

ವೆಬ್ದುನಿಯಾವನ್ನು ಓದಿ