ರಾಹುಲ್ ಗಾಂಧಿಗೆ ಮದ್ವೆ ಕಷ್ಟ, ಪ್ರಧಾನಿ ಆಗಲ್ಲ!

PTI
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಟ್ಟಕ್ಕೇರಿರುವ ಹಾಗೂ ಭಾವೀ ಪ್ರಧಾನಿಯೆಂದೇ ಬಿಂಬಿತವಾಗಿರುವ ಯುವ ರಾಜಕೀಯ ಐಕಾನ್ ರಾಹುಲ್ ಗಾಂಧಿಯವರ ಜನನ 19 ಜೂನ್ 1970ರಲ್ಲಿ ವೃಶ್ಚಿಕ ರಾಶಿಯಲ್ಲಿ ಆಗಿತ್ತು. ರಾಶಿಯಲ್ಲಿ ನೋಡುವುದಾದರೆ, ಭಾಗ್ಯೇಶ ಚಂದ್ರಮ ನೀಚನಾಗಿದ್ದು, ಅದೇ ರಾಶಿ ಸ್ವಾಮಿ ಮಂಗಳ ಎಲ್ಲಿ ಇರಬೇಕಾಗಿತ್ತೋ ಅಲ್ಲಿ ನೀಚ ಶನಿಯಿಂದ ತೃತೀಯ ದೃಷ್ಟಿ ಕೆಟ್ಟದಾಗಿದೆ. ಅಂದರೆ ಅತ್ಯಧಿಕ ಶ್ರಮದ ನಂತರವೂ ಒಳ್ಳೆಯ ಫಲ ಸಿಗುವುದಿಲ್ಲ.

ರಾಹುಲ್‌ಗೆ ವರ್ತಮಾನದಲ್ಲಿ ಗೋಚರವಾಗುವಂತೆ ಕುಂಭ ರಾಶಿ ನಡೆಯುತ್ತಿದೆ. ಇದೇ ಕಾರಣದಿಂದ ತಾಯಿಯ ಮೂಲಕ ಪುತ್ರನಿಗೆ ಮಹಾಕಾರ್ಯದರ್ಶಿಯ ಅಧಿಕಾರವನ್ನು ನೀಡಲಾಯಿತು. ರಾಹುಲ್‌ನ ಕುಂಡಲಿಯಲ್ಲಿ ಯಾವುದೇ ಗ್ರಹವೂ ರಾಜಯೋಗ ಕಾರಕವಾಗಿಲ್ಲ. ಆದರೂ ವೃಶ್ಚಿಕ ರಾಶಿ ಇರುವುದರಿಂದ ಅವರಲ್ಲಿ ಸಾಹಸ ಪ್ರವೃತ್ತಿ ಉತ್ತಮವಾಗಿದೆಯಾದರೂ, ಕೆಲವು ನಷ್ಟಗಳೂ ಸಂಭವಿಸಬಹುದು. ಶನಿ ಪ್ರಜಾಸತ್ತಾ ಕಾರಕನಾಗಿದ್ದರೆ, ರಾಹು ರಾಜನೀತಿಯ ಕಾರಕನಾಗಿದ್ದಾನೆ. ಈ ಎರಡೂ ಗ್ರಹಗಳು ಶುಭಕಾರಕವಾಗಿದ್ದು ರಾಶಿ ಕುಂಡಲಿಯಲ್ಲಿ ಉಳಿದ ವರ್ಷಕ್ಕೆ ಶುಭವಾಗಿ ಒಳ್ಳೆಯ ಪರಿಣಾಮ ನೀಡುವುದು. ಆದರೆ ಅವರ ಜಾತಕದಲ್ಲಿ ಶನಿ ನೀಚನಾಗಿದ್ದು ಷಷ್ಠ ಭಾವದಲ್ಲಿ ರಾಶಿ ಕುಂಡಲಿಯಲ್ಲಿ ಕುಳಿತಿದ್ದಾನೆ. ಅದು ವಿಪಕ್ಷಗಳ ಜತೆಗೆ ಬಲವಾದ ಸಂಘರ್ಷದ ಹೊರತಾಗಿಯೂ ಉತ್ತಮ ಪರಿಣಾಮ ನೀಡುವುದಿಲ್ಲ.

ರಾಹುಲ್ ಗಾಂಧಿ ಸಂಭಾವಿತ, ಸುಸಂಸ್ಕೃತ ಹಾಗೂ ಮೆದುಮನಸ್ಸಿನ ವ್ಯಕ್ತಿ. ಸ್ವಲ್ಪ ವಿಲಾಸೀ ಜಾವನ ಪ್ರಿಯವಾದರೂ, ಸನ್ನಿವೇಶದ ಜತೆ ರಾಜಿ ಮಾಡಿಕೊಂಡು ವಿಲಾಸಿ ಜೀವನವನ್ನು ತ್ಯಾಗ ಮಾಡಿಬಿಡಬಲ್ಲ ಮನಸ್ಸೂ ರಾಹುಲ್‌ಗೆ ಇದೆ. ಸ್ವಲ್ಪ ಧಾರ್ಮಿಕ ಸ್ವಭಾವವೂ ರಾಹುಲ್ ಅವರಲ್ಲಿದೆ. ಆದರೆ ಮದುವೆ ಅನ್ನೋದು ಇವರಿಗೆ ಬಹುಕಷ್ಟದ ವಿಷಯವೇ ಸರಿ. ಇವರಿಗೆ ಕಾಯಕವೇ ಕೈಲಾಸ ಅನ್ನುವ ಮನೋಭಾವ ಇರುತ್ತದೆ. ಹಾಗೂ ಎಷ್ಟು ಗಂಟೆಗಳ ಕಾಲವೂ ಎಡೆಬಿಡದೆ ಕೆಲಸ ಮಾಡುವ ಕಾರ್ಯಧಕ್ಷತೆಯ ಗುಣವೂ ಇವರಿಗೆ ಒಲಿದಿರುತ್ತದೆ. ಸ್ವಂತವಾಗಿ ಆಲೋಚಿಸುವ ಶಕ್ತಿ ಇರುವ ಇವರು ಬಹಳ ಮಹತ್ವಾಕಾಂಕ್ಷಿಗಳು. ಜತೆಗೆ ತಾವು ಯೋಚಿಸಿದಂತೆ ಕೆಲಸ ನಡೆಯದಿದ್ದರೆ ಸಿಕ್ಕಾಪಟ್ಟೆ ಟೆನ್ಶನ್ ಮಾಡಿಕೊಳ್ಳುವವರೂ ಇವರೇ ಆಗಿರುತ್ತಾರೆ.

ರಾಜಕೀಯದಲ್ಲಿ ಉತ್ತಮ ಕಾರ್ಯ ಮಾಡುತ್ತಲೇ ಬಂದರೂ ರಾಜಯೋಗ ಇವರ ಪಾಲಿಗಿಲ್ಲ. ಹಾಗಾಗಿ ಭವಿಷ್ಯದಲ್ಲಿ ಸುಲಭದಲ್ಲಿ ಪ್ರಧಾನಿ ಆಗಲು ಇವರಿಗೆ ಸಾಧ್ಯವಾಗುವುದಿಲ್ಲ. ಅಲ್ಲದೆ ಮುಂದಿನ ರಾಜಕೀಯ ಜೀವನದಲ್ಲಿ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ಉಂಟಾಗಿ ಇವರಿಗೆ ಪ್ರಧಾನಿ ಪಟ್ಟ ಸಿಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ರಾಹುಲ್‌ ಈಗಿನಿಂದಲೇ ಯುವ ಶಕ್ತಿಯನ್ನು ಜಾಗೃತ ಮಾಡಬೇಕು ಅಥವಾ ವಿಪಕ್ಷಗಳಿಗೆ ಅವರ ತಂತ್ರದಿಂದಲೇ ಪ್ರತ್ಯುತ್ತರ ನೀಡಬೇಕು. ಅದನ್ನು ರಾಹುಲ್ ಗಾಂಧಿ ಈಗ ಮಾಡುತ್ತಿದ್ದಾರೆ ಕೂಡಾ. ಹಾಗೆ ಮಾಡಿದರೆ ಮಾತ್ರ ಅವರಿಗೆ ಯಶಸ್ಸು ಸಿಗಬಹುದು. ಇಲ್ಲವಾದರೆ ವಿಪರೀತ ಪರಿಣಾಮ ಉಂಟಾಗಬಹುದು ಎಂದು ಗ್ರಹಗತಿಗಳು ಹೇಳುತ್ತವೆ.

ವೆಬ್ದುನಿಯಾವನ್ನು ಓದಿ