ಕೊರೊನಾ ವೈರಸ್ ಗೆ ಬೆಂಕಿ ಹಚ್ಚಿ ಸುಟ್ಟ ಮಕ್ಕಳು

ಭಾನುವಾರ, 22 ಮಾರ್ಚ್ 2020 (17:41 IST)
ಜನತಾ ಕರ್ಫ್ಯೂಗೆ ರಾಜ್ಯದಲ್ಲಿ ಭಾರೀ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಕೊರೊನಾ ಮಾರಿ ತೊಲಗು ಆಂದೋಲನ ನಡೆದಿದ್ದು, ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಕರೋನಾ ವಿರುದ್ಧದ ಜನತಾ ಕರ್ಪ್ಯೂಗೆ ವ್ಯಾಪಕ ಬೆಂಬಲ‌ ವ್ಯಕ್ತವಾಗಿದ್ದು, ಸಂಜೆ  5 ಗಂಟೆಗೆ ಜನರು‌ ತಮ್ಮ ಮನೆಯ ಮುಂದೆ ನಿಂತು‌ ಚಪ್ಪಾಳೆ, ಜಾಗಟೆ ಬಡಿದು ಸಂಭ್ರಮ ವ್ಯಕ್ತಪಡಿಸಿದರು.

ಮಾಗಡಿ ಪಟ್ಟಣದ ತಿರುಮಲೆಯ ಹೊಸಬಡಾವಣೆಯ ಪುಟ್ಟ ವಿದ್ಯಾರ್ಥಿಗಳು ವೈದ್ಯರಿಗೆ, ದಾದಿಯರಿಗೆ, ಪೌರಕಾರ್ಮಿಕರಿಗೆ, ಯೋಧರಿಗೆ, ಮಾಧ್ಯಮದವರಿಗೆ ಹಾಗೂ ಸಲಾಂ ಪ್ರಧಾನಿ ಮೋದಿ ಬಾಯ್ ಎಂಬ ಕೃತಜ್ಞತೆ ಸಲ್ಲಿಸುವ ನಾಮಫಲಕಗಳನ್ನ ಹಿಡಿದು, ಚಪ್ಪಾಳೆ ತಟ್ಟುವುದರ ಮೂಲಕ ವಿಶೇಷ ವಂದನೆ ತಿಳಿಸಿದರು.

ಇದೇ ಸಂಧರ್ಭದಲ್ಲಿ "ಕೊರೋನಾ ಮಾರಿ" ಪ್ರತಿಕೃತಿಯನ್ನ ದಹಿಸಿ ಕೊರೋನಾ ಭಾರತ ಬಿಟ್ಟು ತೊಲಗು ಎಂದು ಘೋಷಣೆ ಕೂಗುವ ಮೂಲಕ ಪ್ರಧಾನಿ ಮೋದಿಯವರ ಕರೆಯಂತೆ ವಿಶೇಷವಾಗಿ ವಿದ್ಯಾರ್ಥಿಗಳು ಜನತಾ ಬಂದ್ ಆಚರಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ