ಸ್ಟೀವ್ ಸ್ಮಿತ್ ಬ್ಯಾಟಿಂಗ್ ಗಾರ್ಡ್ ಅಳಿಸಿದ ಘಟನೆಯ ನಿಜಾಂಶ ಬಯಲು

ಗುರುವಾರ, 14 ಜನವರಿ 2021 (10:11 IST)
ಸಿಡ್ನಿ: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಆಸೀಸ್ ಕ್ರಿಕೆಟಿಗ ಸ್ಟೀವ್  ಸ್ಮಿತ್ ಟೀಂ ಇಂಡಿಯಾದ ರಿಷಬ್ ಪಂತ್ ಬ್ಯಾಟಿಂಗ್ ಗಾರ್ಡ್ ಅಳಿಸಿದ್ದಾರೆ ಎಂಬ ಆರೋಪದ ನಿಜಾಂಶ ಈಗ ಬಯಲಾಗಿದೆ.


ಅಸಲಿಗೆ ಸ್ಟೀವ್ ಸ್ಮಿತ್ ಗಿಂತ ಮೊದಲೇ ಪಂತ್ ರ ಬ್ಯಾಟಿಂಗ್ ಗಾರ್ಡ್ ನ್ನು ಡ್ರಿಂಕ್ಸ್ ಬ್ರೇಕ್ ವೇಳೆ ಮೈದಾನ ಸಿಬ್ಬಂದಿಗಳು ಪಿಚ್ ಕ್ಲೀನ್ ಮಾಡುವಾಗ ಅಳಿಸಿದ್ದರು ಎಂಬುದಕ್ಕೆ ಪುರಾವೆಯಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು ಈ ಮೂಲಕ ಸ್ಮಿತ್ ಮೋಸ ಮಾಡಿರಲಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ