ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್
ಸೋಮವಾರ, 1 ಜನವರಿ 2024 (08:40 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಪತ್ನಿ, ನಟಿ ಅಥಿಯಾ ಶೆಟ್ಟಿ ಕುರಿತು ಕುತೂಹಲಕಾರೀ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ.
2023 ರ ಏಕದಿನ ವಿಶ್ವಕಪ್ ಫೈನಲ್ ವೇಳೆ ರೋಹಿತ್ ಶರ್ಮಾ ಪತ್ನಿ, ವಿರಾಟ್ ಕೊಹ್ಲಿ ಪತ್ನಿ, ಜಡೇಜಾ ಪತ್ನಿ ಸೇರಿದಂತೆ ಬಹುತೇಕ ಕ್ರಿಕೆಟಿಗರ ಪತ್ನಿಯರು ಮೈದಾನದಲ್ಲಿ ಹಾಜರಿದ್ದರು. ಆದರೆ ಕೆಎಲ್ ರಾಹುಲ್ ಪತ್ನಿ ಅಥಿಯಾ ಮಾತ್ರ ಬಂದಿರಲಿಲ್ಲ.
ಕೇವಲ ಮುಂಬೈನಲ್ಲಿ ನಡೆದಿದ್ದ ಒಂದು ಪಂದ್ಯಕ್ಕೆ ಮಾತ್ರ ಅಥಿಯಾ ಬಂದಿದ್ದರು. ಇದರ ಬಗ್ಗೆ ಕೆಎಲ್ ರಾಹುಲ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ತಮ್ಮ ಪತ್ನಿಯ ನಂಬಿಕೆಯೇ ಇದಕ್ಕೆ ಕಾರಣ ಎಂದಿದ್ದಾರೆ.
ತಂದೆ ಸುನಿಲ್ ಶೆಟ್ಟಿಯಂತೇ ಅಥಿಯಾಗೂ ಕೆಲವೊಂದು ವಿಚಾರದಲ್ಲಿ ತುಂಬಾ ನಂಬಿಕೆಯಂತೆ. ರಾಹುಲ್ ಬ್ಯಾಟಿಂಗ್ ಮಾಡುವಾಗ ಮನೆಯ ನಿರ್ದಿಷ್ಟ ಜಾಗದಲ್ಲಿಯೇ ಕೂರುತ್ತಾರೆ. ಹೀಗೆ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬುದು ಅವರ ನಂಬಿಕೆ. ಅದೇ ಕಾರಣಕ್ಕೆ ಫೈನಲ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರುವ ಬದಲು ತಮ್ಮ ಮನೆಯಲ್ಲಿ ತಾವು ನಂಬುವ ಸ್ಥಳದಲ್ಲಿ ಕೂತು ಪಂದ್ಯ ವೀಕ್ಷಿಸಿದ್ದರಂತೆ. ಸುನಿಲ್ ಶೆಟ್ಟಿ ಕೂಡಾ ಇದೇ ನಂಬಿಕೆಯ ಕಾರಣಕ್ಕೆ ನೆಲದಲ್ಲಿ ಕೂತು ಪಂದ್ಯ ವೀಕ್ಷಿಸುತ್ತಾರೆ.