ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸೋಮವಾರ, 1 ಜನವರಿ 2024 (08:20 IST)
ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನ ಹಿನ್ನಲೆಯಲ್ಲಿ ನಾಯಕ ರೋಹಿತ್ ಶರ್ಮಾಗೆ ಟೀಂ ಇಂಡಿಯಾ ಯಾಕೆ ಅಭ್ಯಾಸ ಪಂದ್ಯವಾಡಲ್ಲ ಎಂಬ ಪ್ರಶ್ನೆ ಎದುರಾಗಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಪಿಚ್ ನ ಮರ್ಮವರಿಯದೇ ಟೀಂ ಇಂಡಿಯಾ ಆಟಗಾರರು ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸಿದ್ದರು. ಇದ್ದವರಲ್ಲಿ ಕೆಎಲ್ ರಾಹುಲ್ ಮೊದಲ ಇನಿಂಗ್ಸ್ ನಲ್ಲಿ ಮತ್ತು ಕೊಹ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಪಿಚ್ ಗೆ ತಕ್ಕ ಆಟವಾಡಿದ್ದರು.

ಟೀಂ ಇಂಡಿಯಾ ಪ್ರಮುಖ ಸರಣಿಗೆ ಮುನ್ನ ಅಭ್ಯಾಸ ಪಂದ್ಯವಾಡದೇ ಕೇವಲ ತಂಡದೊಳಗೇ ಅಭ್ಯಾಸ ಪಂದ್ಯವಾಡಿದ್ದೇ ಇದಕ್ಕೆ ಕಾರಣ ಎಂದು ಕೆಲವರು ಟೀಕಿಸಿದ್ದಾರೆ. ಇದೇ ಪ್ರಶ್ನೆಯನ್ನು ನಾಯಕ ರೋಹಿತ್ ಶರ್ಮಾಗೆ ಪತ್ರಿಕಾಗೋಷ್ಠಯಲ್ಲಿ ಕೇಳಲಾಗಿದೆ.

ಇದಕ್ಕೆ ಉತ್ತರಿಸಿದ ಅವರು ‘ನಾವು ಕಳೆದ 4-5 ವರ್ಷಗಳಿಂದ ಅಭ್ಯಾಸ ಪಂದ್ಯವಾಡುತ್ತಿದ್ದೇವೆ. ಆದರೆ ಈ ಬಾರಿ ಆಡಿಲ್ಲ. ಅಷ್ಟಕ್ಕೂ ಅಭ್ಯಾಸ ಪಂದ್ಯದಲ್ಲಿ ಆಡಿದ ಪಿಚ್ ನ್ನೇ ಪಂದ್ಯಕ್ಕೆ ನೀಡುವುದಿಲ್ಲ. ಅದರ ಬದಲು ನಾವು ನಮ್ಮ ಸಾಮರ್ಥ್ಯಕ್ಕನುಸಾರವಾಗಿ ಪಿಚ್ ನ್ನು ಅರ್ಥ ಮಾಡಿಕೊಂಡು ಅಭ್ಯಾಸ ನಡೆಸುವುದು ಸೂಕ್ತ ಎನಿಸಿತು’ ಎಂದು ರೋಹಿತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ