Asia Cup Cricket: ಇಂದು ಯುಎಇ ವಿರುದ್ಧ ಸೋತರೆ ಪಾಕಿಸ್ತಾನ ಕತೆ ಗೋತಾ

Krishnaveni K

ಬುಧವಾರ, 17 ಸೆಪ್ಟಂಬರ್ 2025 (10:33 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದು ಅತಿಥೇಯ ವಿರುದ್ಧ ಆಡಲಿರುವ ಪಾಕಿಸ್ತಾನಕ್ಕೆ ಇಂದು ಸೋತರೆ ಕತೆ ಗೋತಾ ಆಗಲಿದೆ.

ಯುಎಇ ವಿರುದ್ಧ ಪಾಕಿಸ್ತಾನ ಇಂದು ಮಹತ್ವದ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನಕ್ಕೆ ಸೂಪರ್ ಫೋರ್ ಗೇರುವ ಅವಕಾಶ ಸಿಗಲಿದೆ. ಒಂದು ವೇಳೆ ಯುಎಇ ಗೆದ್ದರೆ ಆ ತಂಡವೇ ಸೂಪರ್ ಫೋರ್ ಹಂತಕ್ಕೇರಲಿದೆ.

ಈಗಾಗಲೇ ಭಾರತ ಸೂಪರ್ ಫೋರ್ ಹಂತಕ್ಕೇರಿದ್ದು ಸೆಪ್ಟೆಂಬರ್ 21 ಕ್ಕೆ ನಡೆಯಲಿರುವ ಈ ಪಂದ್ಯದಲ್ಲಿ ಭಾರತವನ್ನು ಎದುರಿಸುವುದು ಪಾಕಿಸ್ತಾನವೇ ಯುಎಇಯೇ ಎಂದು ಇಂದು ಗೊತ್ತಾಗಲಿದೆ. ಈಗಾಗಲೇ ಒಂದು ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದು, ಭಾರತ ಗೆದ್ದರೂ ಶೇಕ್ ಹ್ಯಾಂಡ್ ವಿವಾದವೇ ಸದ್ದು ಮಾಡಿತ್ತು.

ಇದೀಗ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭಾರತವನ್ನು ಎದುರಿಸುವ ಅನಿವಾರ್ಯತೆ ಎದುರಾಗುತ್ತದೆಯೇ ಎಂದು ಇಂದು ಗೊತ್ತಾಗಲಿದೆ. ಸದ್ಯಕ್ಕೆ 2 ಪಂದ್ಯಗಳಿಂದ 1 ಸೋತು 1 ಗೆದ್ದು 2 ಅಂಕ ಸಂಪಾದಿಸಿದೆ. ಯುಎಇ ಕೂಡಾ 2 ಪಂದ್ಯಗಳಿಂದ 1 ಸೋತು ಇನ್ನೊಂದು ಗೆದ್ದು 2 ಅಂಕ ಸಂಪಾದಿಸಿದೆ. ಆದರೆ ರನ್ ರೇಟ್ ಆಧಾರದಲ್ಲಿ ಸದ್ಯಕ್ಕೆ ಪಾಕಿಸ್ತಾನವೇ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದು ಪಾಕಿಸ್ತಾನ ಸೋತರೆ ಯುಎಇ ಎರಡನೇ ಸ್ಥಾನಕ್ಕೇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ