ಆಸ್ಟ್ರೇಲಿಯಾ ಇಲ್ಲದ ಟಿ20 ವಿಶ್ವಕಪ್ ಸೂಪರ್ 8: ಅದೊಂದು ಅಹಂಕಾರವೇ ಅವನತಿಗೆ ಕಾರಣವಾ

Krishnaveni K

ಬುಧವಾರ, 18 ಫೆಬ್ರವರಿ 2026 (10:47 IST)
Photo Credit: X
ಮುಂಬೈ: ವಿಶ್ವಕಪ್ ಕ್ರಿಕೆಟ್ ಯಾವುದೇ ಫಾರ್ಮ್ಯಾಟ್ ಆಗಿರಲಿ, ಆಸ್ಟ್ರೇಲಿಯಾ ಪ್ಲೇ ಆಫ್ ಹಂತಕ್ಕೆ ಬರದೇ ಇರಲ್ಲ. ಆದರೆ ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲೇ ಆಸ್ಟ್ರೇಲಿಯಾ ಆಘಾತಕಾರಿಯಾಗಿ ಹೊರಬಿದ್ದಿದೆ.

ಆಸ್ಟ್ರೇಲಿಯಾಕ್ಕೆ ಬಹುಶಃ ಇಂತಹ ದಯನೀಯ ಅವಸ್ಥೆ ಸದ್ಯಕ್ಕೆ ಎಂದಿಗೂ ಬಂದಿರಲಿಲ್ಲ. ಪ್ರತೀ ಬಾರಿ ಫೈನಲ್ ನಲ್ಲಿ ಒಂದು ತಂಡ ಆಸ್ಟ್ರೇಲಿಯಾವೇ ಇರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಆಸ್ಟ್ರೇಲಿಯಾ ತಂಡ ಐಸಿಸಿ ಟೂರ್ನಿಗಳಲ್ಲಿ ಎಡವುತ್ತಿದೆ.

ಭಾರತೀಯ ಫ್ಯಾನ್ಸ್ ಮಾತ್ರ 2024 ರ ಏಕದಿನ ವಿಶ್ವಕಪ್ ಗೆಲುವಿನ ನಂತರ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಕೂತಿದ್ದ ಘಟನೆಯನ್ನೇ ನೆನಪಿಸುತ್ತಿದ್ದಾರೆ. ಅಂದಿನಿಂದಲೇ ಆಸ್ಟ್ರೇಲಿಯಾದ ಅಧಃಪತನ ಶುರುವಾಗಿದೆ ಎನ್ನುತ್ತಿದ್ದಾರೆ. ವಿಶ್ವಕಪ್ ಫೈನಲ್ ವರೆಗೂ ಎಲ್ಲಾ ಪಂದ್ಯಗಳನ್ನೂ ಗೆದ್ದು ಫೈನಲ್ ನಲ್ಲಿ ಸೋತ ಟೀಂ ಇಂಡಿಯಾ ದುಃಖದ ಮಡುವಿನಲ್ಲಿದ್ದರೆ ಅತ್ತ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ಕೊಟ್ಟು ದರ್ಪ ಮೆರೆದಿದ್ದರು. ಈ ಅಹಂಕಾರವೇ ಆಸ್ಟ್ರೇಲಿಯಾವನ್ನು ಅವನತಿಯತ್ತ ಕೊಂಡೊಯ್ದಿದೆ ಎನ್ನುವುದು ಕ್ರಿಕೆಟ್ ಪ್ರಿಯರ ಅಭಿಪ್ರಾಯವಾಗಿದೆ.

ಆದರೆ ಯಾರೂ ಸೋಲಿಸಲಾಗದ ತಂಡ ಎಂಬಂತಿದ್ದ ಆಸ್ಟ್ರೇಲಿಯಾವನ್ನು ಮಣಿಸಬಹುದು ಎಂದು ತೋರಿಸಿಕೊಟ್ಟಿದ್ದು ಧೋನಿ ನೇತೃತ್ವದ ಟೀಂ ಇಂಡಿಯಾ. ಭಾರತದಲ್ಲಿ ನಡೆದಿದ್ದ 2011 ರ ಏಕದಿನ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಭಾರತ ಸೋಲಿಸಿತ್ತು. ಅಂದಿನಿಂದ ಆಸ್ಟ್ರೇಲಿಯಾಗೂ ಸೋಲಿನ ರುಚಿ ಕಾಣಲು ಶುರುವಾಗಿತ್ತು. ಇಂದೀಗ ಐಸಿಸಿ ಟೂರ್ನಿಗಳಲ್ಲೇ ದುರ್ಬಲ ತಂಡಗಳ ಎದುರೂ ಸೋಲುವ ಹಂತಕ್ಕೆ ಬಂದು ತಲುಪಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ