ಆಸ್ಟ್ರೇಲಿಯಾ ಬಿಗಿಹಿಡಿತದಲ್ಲಿ ಪರ್ತ್ ಟೆಸ್ಟ್

ಭಾನುವಾರ, 16 ಡಿಸೆಂಬರ್ 2018 (15:47 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್‍ ನ ತೃತೀಯ ದಿನದಂತ್ಯಕ್ಕೆ ಆಸ್ಟ್ರೇಲಿಯಾ ಮುನ್ನಡೆ ವಿಸ್ತರಿಸಿಕೊಂಡು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.


ತೃತೀಯ ದಿನದಂತ್ಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ಇದರೊಂದಿಗೆ ಇನಿಂಗ್ಸ್ ಮುನ್ನಡೆಯನ್ನು 175 ರನ್ ಗಳಿಗೆ ವಿಸ್ತರಿಸಿದೆ. ಆಸ್ಟ್ರೇಲಿಯಾ ಬಳಿ ಇನ್ನೂ 6 ವಿಕೆಟ್ ಬಾಕಿಯಿದ್ದು, ಈ ಪಿಚ್ ನಲ್ಲಿ 250 ಪ್ಲಸ್ ರನ್ ಕೂಡಾ ಕಠಿಣ ಸವಾಲಾಗಲಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಮೊಹಮ್ಮದ್ ಶಮಿ 2, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಕಬಳಿಸಿದ್ದಾರೆ. 41 ರನ್ ಗಳಿಸಿರುವ ಉಸ್ಮಾನ್ ಖವಾಜ ಮತ್ತು 8 ರನ್ ಗಳಿಸಿರುವ ನಾಯಕ ಟಿಮ್ ಪೇಯ್ನ್‍ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ