ಪತ್ನಿಗೆ ಕಿರುಕುಳ ನೀಡಿದ ತಪ್ಪಿಗೆ ಮೊಹಮ್ಮದ್ ಶಮಿ ಕಾಂಟ್ರಾಕ್ಟ್ ರದ್ದು ಮಾಡಿ ತಪ್ಪು ಮಾಡಿತೇ ಬಿಸಿಸಿಐ?
ಹಾಗಂತ ಬಿಸಿಸಿಐ ಕಾನೂನು ಸಲಹೆಗಾರ್ತಿ ಉಷಾ ನಾಥ್ ಬಂಡೋಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ. ಶಮಿ ವೈಯಕ್ತಿಕ ಬದುಕಿನಲ್ಲಿ ಆಗಿರುವ ತಪ್ಪುಗಳಿಗೂ ಬಿಸಿಸಿಐಗೂ ಯಾವುದೇ ಸಂಬಂಧವಿಲ್ಲ.
ಅವೆರಡನ್ನೂ ಲಿಂಕ್ ಮಾಡಿ ಬಿಸಿಸಿಐ ವಾರ್ಷಿಕ ಗುತ್ತಿಗೆ ನೀಡದೇ ಇರುವುದು ತಪ್ಪಾಗುತ್ತದೆ. ಒಬ್ಬ ಆಟಗಾರನನ್ನು ತಂಡಕ್ಕೆ ಆರಿಸುವುದು ಆತನ ಸಾಮರ್ಥ್ಯದ ಆಧಾರದ ಮೇಲೆ. ವೈಯಕ್ತಿಕ ಬದುಕಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.