ಭಾರತೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯ ತೀರ್ಮಾನವೇ ಅಂತಿಮವೇ?! ಬಿಸಿಸಿಐ ಹೇಳಿದ್ದೇನು?

ಸೋಮವಾರ, 23 ಸೆಪ್ಟಂಬರ್ 2019 (08:59 IST)
ಮುಂಬೈ: ಸದ್ಯಕ್ಕೆ ಬೆಳವಣಿಗೆ ಗಮನಿಸಿದರೆ ಮೇಲ್ನೋಟಕ್ಕೆ ಟೀಂ ಇಂಡಿಯಾ ಕ್ರಿಕೆಟ್ ನಲ್ಲಿ ಏನಾಗಬೇಕು, ಬೇಡ ಎಂಬುದನ್ನು ನಿಯಂತ್ರಿಸುತ್ತಿರುವುದು ನಾಯಕ ವಿರಾಟ್ ಕೊಹ್ಲಿ ಎಂದೇ ಎಲ್ಲರಿಗೂ ಅನಿಸುತ್ತಿದೆ.


ಅದರಲ್ಲೂ ಮುಖ್ಯವಾಗಿ ತಂಡದ ಕೋಚ್ ಯಾರಾಗಬೇಕು ಎಂಬುದು ಕೊಹ್ಲಿಯದ್ದೇ ಅಂತಿಮ ತೀರ್ಮಾನ ಎಂಬ ಭಾವನೆ ಮೂಡಿಸಿತ್ತು. ಈ ಬಗ್ಗೆ ಬಿಸಿಸಿಐ ಸಿಇಒ ವಿನೋದ್ ರಾಯ್ ಅವರನ್ನು ಪ್ರಶ್ನೆ ಮಾಡಿದಾಗ ಅವರು ಹೇಳಿದ್ದೇನು ಗೊತ್ತಾ?

‘ಕೋಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿಯದ್ದೇ ಅಂತಿಮ ತೀರ್ಮಾನ ಎನ್ನಲಾಗದು. ಸದ್ಯದ ಪರಿಸ್ಥಿತಿಯಲ್ಲಿ ರವಿಶಾಸ್ತ್ರಿಗಿಂತ ಉತ್ತಮ ಕೋಚ್ ಯಾರಿದ್ದಾರೆ? ಅವರು ಬಂದ ನಂತರ ತಂಡದಲ್ಲಿ ಒಗ್ಗಟ್ಟಿದೆ,ಹೋರಾಡುವ ಮನೋಭಾವ ಬಂದಿದೆ. ಹೀಗಿರುವಾಗ  ಅನಿವಾರ್ಯವಾಗಿ ಅವರೇ ಪುನರಾಯ್ಕೆಯಾದರು. ವಿಶ್ವಕಪ್ ಸೋಲಿಗೂ ಕೊಹ್ಲಿಯನ್ನು ಯಾರೂ ದೂಷಿಸಲಿಲ್ಲ ಎನ್ನುವುದು ತಪ್ಪು. ಎಲ್ಲವೂ ಬಹಿರಂಗವಾಗಿಲ್ಲ ಅಷ್ಟೇ. ನಮ್ಮ ಸಭೆಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ’ ಎಂದು ವಿನೋದ್ ರಾಯ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ