ಗರ್ಲ್ ಫ್ರೆಂಡ್ ಫೋಟೋ ಪೋಸ್ಟ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್
ಗುರುವಾರ, 17 ಜನವರಿ 2019 (09:48 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಿಷಬ್ ಪಂತ್ ಇದೀಗ ಬಿಡುವಿನ ವೇಳೆಯ ಖುಷಿ ಅನುಭವಿಸುತ್ತಿದ್ದು, ತಮ್ಮ ಗರ್ಲ್ ಫ್ರೆಂಡ್ ಜತೆಗಿನ ಸುಂದರ ಕ್ಷಣವೊಂದನ್ನು ಪ್ರಕಟಿಸಿದ್ದಾರೆ.
ರಿಷಬ್ ಪಂತ್ ತಮ್ಮ ಗೆಳತಿ ಇಶಾ ನೇಗಿ ಜತೆಗಿನ ರೊಮ್ಯಾಂಟಿಕ್ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇಶಾ ಕೂಡಾ ಇದೇ ಫೋಟೋವನ್ನು ಪ್ರಕಟಿಸಿದ್ದಾರೆ. ಫೋಟೋ ಜತೆಗೆ ರಿಷಬ್ ಇಶಾರನ್ನು ತಮ್ಮ ಖುಷಿಗೆ ಕಾರಣಳಾದವಳು ಎಂದು ಹೊಗಳಿ ಬರೆದಿದ್ದಾರೆ.
ರಿಷಬ್ ತಮ್ಮ ಗೆಳತಿಯ ಫೋಟೋ ಪ್ರಕಟಿಸುತ್ತಿದ್ದಂತೆ ಕ್ರಿಕೆಟ್ ಜಗತ್ತಿನ ಸ್ನೇಹಿತರೂ ಸೇರಿದಂತೆ ಹಲವು ಅಭಿಮಾನಿಗಳೂ ಕಾಮೆಂಟ್ ಮಾಡಿ ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ರಿಷಬ್ ರನ್ನು ಬೇಬಿ ಸಿಟ್ಟಿಂಗ್ ಮಾಡಲು ಲಾಯಕ್ಕು ಎಂದು ಸ್ಲೆಡ್ಜಿಂಗ್ ಮಾಡಿದ್ದರು. ಇದಾದ ಬಳಿಕ ರಿಷಬ್ ಕೂಡಾ ತಿರುಗೇಟು ಕೊಡುವ ಮೂಲಕ ಭಾರೀ ಜನಪ್ರಿಯರಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ