ಡಿ.26 ಕೆಎಲ್ ರಾಹುಲ್ ಗೆ ವಿಶೇಷ ಯಾಕೆ ಗೊತ್ತಾ?
ಡಿಸೆಂಬರ್ 26 ರಂದು ಕೆಎಲ್ ರಾಹುಲ್ ತಮ್ಮ ವೃತ್ತಿ ಜೀವನ ಆರಂಭಿಸಿದ ದಿನ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅವರು ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ಇನ್ನು, 2021 ರಲ್ಲಿ ಇದೇ ದಿನ ದ.ಆಫ್ರಿಕಾ ವಿರುದ್ಧ 123 ರನ್ ಸಿಡಿಸಿದ್ದರು. ವಿಶೇಷವೆಂದರೆ ಇದೇ ದಿನ ನಿನ್ನೆ ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಕಷ್ಟ ಸ್ಥಿತಿಯಲ್ಲಿದ್ದಾಗ 70 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ಅರ್ಧಶತಕದ ಇನಿಂಗ್ಸ್ ಯಾವ ಶತಕಕ್ಕೂ ಕಡಿಮೆಯಿಲ್ಲದಂತಿತ್ತು.
ಮನಮೋಹಕ ಹೊಡೆತಗಳ ಮೂಲಕ ಮಿಂಚಿದ ಕೆಎಲ್ ರಾಹುಲ್ ಪೆವಿಲಿಯನ್ ಕೂತಿದ್ದ ಗುರು ದ್ರಾವಿಡ್ ಕೂಡಾ ತಲೆದೂಗುವಂತಹ ಇನಿಂಗ್ಸ್ ಆಡಿದ್ದಾರೆ. ಅವರ ಈ ಇನಿಂಗ್ಸ್ ಶತಕಕ್ಕಿಂತಲೂ ಮಿಗಿಲಾದುದು ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಬಣ್ಣಿಸಿದ್ದಾರೆ.