ವಿಕಲಚೇತನ ಅಭಿಮಾನಿಯೊಂದಿಗೆ ಧೋನಿ ನಡೆದುಕೊಂಡ ರೀತಿಗೆ ಬೌಲ್ಡ್ ಆದ ಅಭಿಮಾನಿಗಳು!
ಅಂತಿಮ ಏಕದಿನ ಪಂದ್ಯ ನಡೆದ ತಿರುವನಂತಪುರಂನ ಮೈದಾನದ ಹೊರಗೆ ತಮಗಾಗಿ ಕಾದು ಕುಳಿತಿದ್ದ ವಿಕಲ ಚೇತನ ಅಭಿಮಾನಿಯನ್ನು ಭೇಟಿ ಮಾಡಿದ ಧೋನಿ ಸೀದಾ ಹೋಗಿ ಕೈಕುಲುಕಿದ್ದಲ್ಲದೆ, ಆತನ ಜತೆಗೆ ಕೆಲ ಕಾಲ ಮಾತುಕತೆ ನಡೆಸಿ ಫೋಟೋ ತೆಗೆಸಿಕೊಂಡರು. ಅಷ್ಟೇ ಅಲ್ಲ, ಆತನ ಆಸೆಯಂತೆ ಕೈ ಮೇಲೆ ಚುಂಬಿಸಲು ಅವಕಾಶ ಕೊಟ್ಟರು.
ಧೋನಿ ಅಭಿಮಾನಿಯೊಂದಿಗೆ ನಡೆದುಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ಯಾಪ್ಟನ್ ಕೂಲ್ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.