ಪದ್ಮಭೂಷಣ ಪ್ರಶಸ್ತಿಗೆ ಧೋನಿ ಹೆಸರು ಶಿಫಾರಸು: ಬಿಸಿಸಿಐ

ಬುಧವಾರ, 20 ಸೆಪ್ಟಂಬರ್ 2017 (14:42 IST)
ಖ್ಯಾತ ಕ್ರಿಕೆಟಿಗ, ಮಾಜಿ ಟೀಂ ಇಂಡಿಯಾ ನಾಯಕ ಎಂ.ಎಸ್ ಧೋನಿ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಎಂ.ಎಸ್.ಧೋನಿ ಕ್ರಿಕೆಟ್ ಕ್ಷೇತ್ರಕ್ಕೆ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಅವರ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
 
2011 ರಲ್ಲಿ ವಿಶ್ವಕಪ್ ಗೆಲುವು 2007ರಲ್ಲಿ ಟ್ವೆಂಟಿ20 ವಿಶ್ವಕಪ್ ಗೆಲುವು, 10 ಸಾವಿರ ರನ್‌ಗಳು ಮತ್ತು 90 ಟೆಸ್ಟ್ ಪಂದ್ಯಗಳು ಆಡಿದ ಧೋನಿಯ ಸಾಧನೆ ಅತ್ಯುತ್ತಮವಾದದು. ಅವರಿಗಿಂತ ಪದ್ಮಭೂಷಣ ಪ್ರಶಸ್ತಿ ನಾಮನಿರ್ದೇಶನಕ್ಕೆ ಬೇರೆ ಕ್ರಿಕೆಟಿಗನಿಲ್ಲ ಎಂದು ಬಿಸಿಸಿಐ ತಿಳಿಸಿದೆ.  
 
ಈ ವರ್ಷದ ಪದ್ಮ ಪ್ರಶಸ್ತಿಗಳಿಗೆ ಬಿಸಿಸಿಐ ಯಾವುದೇ ನಾಮನಿರ್ದೇಶನಗಳನ್ನು ಕಳುಹಿಸಿಕೊಟ್ಟಿಲ್ಲ. 36 ವರ್ಷ ವಯಸ್ಸಿನ ಮಾಜಿ ನಾಯಕ ಧೋನಿ,  302 ಏಕದಿನ ಪಂದ್ಯಗಳಲ್ಲಿ 9737 ರನ್‌ಗಳನ್ನು ಗಳಿಸಿದ್ದಾರೆ ಮತ್ತು 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್,   78 ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1212 ರನ್‍‌ ಗಳಿಸಿದ್ದಾರೆ.
 
ಧೋನಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಲ್ಲಿ ಅತ್ಯುನ್ನತ ನಾಗರಿಕ ಗೌರವ ಪಡೆದ 11 ನೇ ಭಾರತೀಯ ಕ್ರಿಕೆಟಿಗರಾಗುತ್ತಾರೆ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸುನೀಲ್ ಗಾವಸ್ಕರ್, ರಾಹುಲ್ ದ್ರಾವಿಡ್, ಚಂದು ಬೋರ್ಡೆ, ಪ್ರೊಫೆಸರ್ ಡಿ.ಬಿ.ದಿಯೋಧರ್, ಕರ್ನಲ್ ಸಿ.ಕೆ ನಾಯ್ಡು, ಮತ್ತು ಲಾಲಾ ಅಮರನಾಥ್ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಕೆಲವು ಪ್ರಮುಖ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಕ್ರಿಕೆಟಿಗರಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ