ಎರಡೆರಡು ಬಾರಿ ಟೀಂ ಇಂಡಿಯಾ ಪರ ತೀರ್ಪು: ಅಂಪಾಯರ್ ವಿರುದ್ಧ ಇಂಗ್ಲೆಂಡ್ ದೂರು

ಗುರುವಾರ, 25 ಫೆಬ್ರವರಿ 2021 (10:52 IST)
ಅಹಮ್ಮದಾಬಾದ್: ಭಾರತದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಅಂಪಾಯರಿಂಗ್ ಬಗ್ಗೆ ಇಂಗ್ಲೆಂಡ್ ತಂಡ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಗೆ ದೂರು ನೀಡಿದೆ.

 
இங்கிலாந்து 112 ரன்களில் சுருண்டது: 50 ஆண்டுகளில் 6-வது முறை

ಭಾರತೀಯ ಇನಿಂಗ್ಸ್ ನ 2 ನೇ ಓವರ್ ನಲ್ಲಿ ಶಬ್ನಂ ಗಿಲ್ ಗೆ ಹೊಡೆದ ಚೆಂಡನ್ನು ವಿಕೆಟ್ ಕೀಪರ್ ಹಿಡಿದಿದ್ದರಿಂದ ಔಟ್ ಎಂದು ಇಂಗ್ಲೆಂಡ್ ಸಂಭ್ರಮಾಚರಿಸಿತ್ತು. ಆದರೆ ಮೂರನೇ ಅಂಪಾಯರ್ ಇದು ನಾಟೌಟ್ ಎಂದು ಘೋಷಿಸಿದ್ದರು. ಇದು ಜೋ ರೂಟ್ ಸೇರಿದಂತೆ ಇಂಗ್ಲೆಂಡ್ ಆಟಗಾರರ ಸಿಟ್ಟಿಗೆ ಕಾರಣವಾಯ್ತು. ಮತ್ತೆ ರೋಹಿತ್ ಶರ್ಮಾಗೂ ಇದೇ ರೀತಿ ಸ್ಟಂಪಿಂಗ್ ಗೆ ಮನವಿ ಸಲ್ಲಿಸಿದಾಗ ಮೂರನೇ ಅಂಪಾಯರ್ ಒಂದೇ ಆಂಗಲ್ ನಲ್ಲಿ ರಿವ್ಯೂ ನೋಡಿ ನಾಟೌಟ್ ತೀರ್ಪು ನೀಡಿದ್ದರು. ಇದನ್ನು ವಿವಿಧ ಕೋನಗಳಲ್ಲಿ ನೋಡಬೇಕಿತ್ತು ಎಂದು ಫೀಲ್ಡ್ ಅಂಪಾಯರ್ ಜೊತೆ ಜೋ ರೂಟ್ ವಾಗ್ವಾದ ನಡೆಸಿದ್ದರು. ಇವೆರಡೂ ತೀರ್ಪು ಇಂಗ್ಲೆಂಡ್ ವಿರುದ್ಧವಾಗಿ ಬಂದಿದೆ ಎಂದು ಮ್ಯಾಚ್ ರೆಫರಿ ಮುಂದೆ ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ