ಐಸಿಸಿಯ ಮೊದಲ ಮಹಿಳಾ ರೆಫರಿಯಾಗಿ ಭಾರತದ ಜಿಎಸ್ ಲಕ್ಷ್ಮಿ ಆಯ್ಕೆ

ಬುಧವಾರ, 15 ಮೇ 2019 (08:00 IST)
ದುಬೈ: ಐಸಿಸಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮಹಿಳಾ ರೆಫರಿಯೊಬ್ಬರನ್ನು ನೇಮಕ ಮಾಡಿದ್ದು, ಅವರು ಭಾರತೀಯರು ಎನ್ನುವುದು ವಿಶೇಷವಾಗಿದೆ.


ಐಸಿಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಮೊದಲ ಮಹಿಳಾ ರೆಫರಿಗೆ ಸ್ವಾಗತ ಕೋರಿದೆ. ಭಾರತೀಯ ಮೂಲದ ಜಿಎಸ್ ಲಕ್ಷ್ಮಿ ಮೊದಲ ಮಹಿಳಾ ಅಂತಾರಾಷ್ಟ್ರೀಯ ರೆಫರಿಯಾಗಿ ನೇಮಕವಾಗಿದ್ದಾರೆ.

ಕೆಲವೇ ದಿನಗಳ ಮೊದಲು ಆಸ್ಟ್ರೇಲಿಯಾ ಮೂಲದ ಕ್ಲಾರಿ ಪೊಲೊಸಾಕೊ ಪುರುಷರ ಪಂದ್ಯದಲ್ಲಿ ಅಂಪಾಯರಿಂಗ್ ಮಾಡಿದ ಮೊದಲ ಮಹಿಳಾ ಅಂಪಾಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮೊದಲ ಮಹಿಳಾ ರೆಫರಿ ಎನಿಸಿಕೊಳ್ಳುವ ಖ್ಯಾತಿ ಭಾರತ ಮೂಲದ ಲಕ್ಷ್ಮಿಗೆ ಒಲಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ