IND vs AUS: ಬೌಲ್ಡ್ ಮಾಡಿದ್ದಕ್ಕೆ ಮೊಹಮ್ಮದ್ ಸಿರಾಜ್ ಕೆಕ್ಕರಿಸಿ ನಿಂದಿಸಿದ ಟ್ರಾವಿಸ್ ಹೆಡ್: ವಿಡಿಯೋ

Krishnaveni K

ಶನಿವಾರ, 7 ಡಿಸೆಂಬರ್ 2024 (14:51 IST)
Photo Credit: X
ಅಡಿಲೇಡ್: ಆಸ್ಟ್ರೇಲಿಯಾ ಕ್ರಿಕೆಟಿಗರು ಎದುರಾಳಿಗಳನ್ನು ಕೆಣಕುವುದರಲ್ಲಿ ನಿಸ್ಸೀಮರು. ಆದರೆ ತಮ್ಮನ್ನು ಕೆಣಕಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡುವುದರಲ್ಲಿ ಭಾರತೀಯ ಕ್ರಿಕೆಟಿಗರೂ ಕಮ್ಮಿಯಿಲ್ಲ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಆಸೀಸ್ ಶತಕಧಾರೀ ಟ್ರಾವಿಸ್ ಹೆಡ್ ಮತ್ತು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನಡುವೆ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ 180 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸೀಸ್ 337 ರನ್ ಗಳಿಗೆ ಆಲೌಟ್ ಆಗಿದ್ದು 157 ರನ್ ಗಳ ಮುನ್ನಡೆ ಸಾಧಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಸೀಸ್ ಪರ ಇಂದು ಟ್ರಾವಿಸ್ ಹೆಡ್ ಶತಕ ಸಿಡಿಸಿ ಮಿಂಚಿದರು. ಅವರು 140 ರನ್ ಗಳಿಸಿದರು. ಆದರೆ ಈ ವೇಳೆ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಬೌಲ್ಡ್ ಔಟ್ ಆದರು.

ಸಿರಾಜ್ ತಮ್ಮನ್ನು ಬೌಲ್ಡ್ ಮಾಡುತ್ತಿದ್ದಂತೇ ಅವರನ್ನು ಕೆಕ್ಕಿರಿಸಿ ನೋಡಿದ ಟ್ರಾವಿಸ್ ಹೆಡ್ ವಾಚಮಗೋಚರವಾಗಿ ನಿಂದಿಸಿ ಹೊರನಡೆದಿದ್ದರು. ಇದಕ್ಕೆ ಸಿರಾಜ್ ಕೂಡಾ ಪಕ್ಕ ಹೋಗಿ ದಿಟ್ಟಿಸಿ ನೋಡಿದ್ದಾರೆ. ಇಬ್ಬರ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದೆ.

ಇನ್ನು, ಈ ಇನಿಂಗ್ಸ್ ನಲ್ಲಿ ವೇಗಿಗಳೇ ಮೇಲುಗೈ ಸಾಧಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ 4 ವಿಕೆಟ್ ಕಬಳಿಸಿದರೆ ಆರ್ ಅಶ್ವಿನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಕಬಳಿಸಿದ್ದಾರೆ.

Australian Crowd booing you means you are on right path????✨
They boo even King Virat Kohli in Past. #INDvsAUSpic.twitter.com/dDWVd0hh4R

— Mufaddal Parody (@mufaddal_voira) December 7, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ