ಭಾರತ-ಆಸ್ಟ್ರೇಲಿಯಾ ಏಕದಿನ: ಶ್ರೇಯಸ್ ಅಯ್ಯರ್, ಶುಬ್ಮನ್ ಗಿಲ್ ಶತಕ

ಭಾನುವಾರ, 24 ಸೆಪ್ಟಂಬರ್ 2023 (16:41 IST)
ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಆರಂಭಿಕ ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಗಳಿಸಿದ್ದಾರೆ.

ಟಾಸ್ ಗೆದ್ದ ಆಸೀಸ್ ಇಂದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಶುಬ್ಮನ್ ಗಿಲ್ ಜೊತೆ ಕಣಕ್ಕಿಳಿದ ಋತುರಾಜ್ ಗಾಯಕ್ ವಾಡ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ಶ್ರೇಯಸ್-ಗಿಲ್ ಜೋಡಿ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿತು. ಭರ್ತಿ 200 ರನ್ ಗಳ ಜೊತೆಯಾಟವಾಡಿದ ಜೋಡಿ ಆಸೀಸ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ಶ್ರೇಯಸ್ 90 ಎಸೆತಗಳಿಂದ 3 ಸಿಕ್ಸರ್ ಸಹಿತ 105 ರನ್ ಗಳಿಸಿ ಔಟಾದರು.

ಇನ್ನೊಂದೆಡೆ ಗಿಲ್ 93 ಎಸೆತಗಳಿಂದ 101 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಗಿಲ್ ಗೆ ಇದು ಈ ವರ್ಷದ 5 ನೇ ಶತಕವಾಗಿದೆ. ಈ ಮೂಲಕ ಒಂದೇ ವರ್ಷ ಐದು ಶತಕ ಸಿಡಿಸಿದ ಸಚಿನ್, ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಶಿಖರ್ ಧವನ್ ಅವರ ಸಾಲಿಗೆ ಸೇರ್ಪಡೆಯಾದರು. ನಾಯಕ ಕೆಎಲ್ ರಾಹುಲ್ 9 ರನ್ ಗಳಿಸಿದ್ದಾರೆ. ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಭಾರತ ಇತ್ತೀಚೆಗಿನ ವರದಿ ಬಂದಾಗ 34 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ