ಭಾರತ-ಆಸ್ಟ್ರೇಲಿಯಾ ಟಿ20: ಮಳೆಯಿಂದಾಗಿ ಅರ್ಧಕ್ಕೆ ನಿಂತ ಪಂದ್ಯ
ಬುಧವಾರ, 21 ನವೆಂಬರ್ 2018 (14:57 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ ಆರಂಭದಲ್ಲಿ ಬಿಗುವಿನ ದಾಳಿ ನಡೆಸಿತ್ತು. ಆದರೆ ನಂತರ ಲಯ ಕಳೆದುಕೊಂಡ ಭಾರತೀಯ ಬೌಲಿಂಗ್ ನ್ನು ಆಸೀಸ್ ಆಟಗಾರರು ಚೆನ್ನಾಗಿಯೇ ದಂಡಿಸಿದರು.
ಅದರಲ್ಲೂ ವಿಶೇಷವಾಗಿ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 23 ಎಸೆತಗಳಲ್ಲಿ 4 ಸಿಕ್ಸರ್ ಗಳೊಂದಿಗೆ 46 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಮಾರ್ಕಸ್ ಸ್ಟೊಯಿನಿಸ್ 18 ಬಾಲ್ ಗಳಲ್ಲಿ 31 ರನ್ ಗಳಿಸಿದ್ದಾರೆ.
ಕೃಣಾಲ್ ಪಾಂಡ್ಯ ಎಲ್ಲರಿಗಿಂತ ದುಬಾರಿ ಬೌಲರ್ ಎನಿಸಿದರು. ಅವರು ಕೇವಲ 4 ಓವರ್ ಗಳಲ್ಲಿ 55 ರನ್ ನೀಡಿ ವಿಕೆಟ್ ಕೀಳಲು ವಿಫಲರಾಗಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾಗೆ ಇದುವರೆಗೆ ವಿಕೆಟ್ ಸಿಗದೇ ಇದ್ದರೂ ಹೆಚ್ಚು ರನ್ ನೀಡಿಲ್ಲ. ಯುವ ಖಲೀಲ್ ಅಹಮ್ಮದ್ 3 ಓವರ್ ಗಳಲ್ಲಿ 42 ರನ್ ನೀಡಿ 1 ವಿಕೆಟ್ ಕಿತ್ತಿದ್ದಾರೆ. ಇದ್ದವರಲ್ಲಿ ಕುಲದೀಪ್ ಯಾದವ್ ಪರಿಣಾಮಕಾರಿ ದಾಳಿ ಸಂಘಟಿಸಿದ್ದು 4 ಓವರ್ ಗಳಲ್ಲಿ ಕೇವಲ 24 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ಇದೀಗ 16.1 ಓವರ್ ಗಳ ಆಟವಷ್ಟೇ ನಡೆದಿದ್ದು,ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ. ಮಳೆ ನಿಂತ ಮೇಲೆ ಆಟ ಮುಂದುವರಿಯಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.