ಭಾರತ-ಆಸ್ಟ್ರೇಲಿಯಾ ಟಿ20: ಆಸ್ಟ್ರೇಲಿಯಾಗೆ ಶತಕದ ‘ಜೋಶ್’

ಗುರುವಾರ, 23 ನವೆಂಬರ್ 2023 (20:49 IST)
Photo Courtesy: Twitter
ವಿಶಾಖಪಟ್ಟಣಂ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಆಸೀಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಆಸ್ಟ್ರೇಲಿಯಾ ಪರ ಜೋಶ್ ಇಂಗ್ಲಿಸ್ 50 ಎಸೆತಗಳಲ್ಲಿ 8 ಸಿಕ್ಸರ್ ಸಹಿತ 110 ರನ್ ಸಿಡಿಸಿದ್ದಾರೆ. ಸ್ಟೀವ್ ಸ್ಮಿತ್ 52 ರನ್ ಗಳ ಕೊಡುಗೆ ನೀಡಿದರು. ಭಾರತದ ಅನನುಭವಿ ಬೌಲಿಂಗ್ ನ್ನು ಜೋಶ್ ಒಬ್ಬರೇ ಚೆಂಡಾಡಿದರು. ಇದರಿಂದಾಗಿ ಆಸೀಸ್ ಬೃಹತ್ ಮೊತ್ತ ಪೇರಿಸಲು ಸಾಧ‍್ಯವಾಯಿತು.

ಟಾಸ್ ಗೆದ್ದು ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು. ಆದರೆ ಭಾರತೀಯ ಬೌಲರ್ ಗಳು ಆಸೀಸ್ ಮುಂದೆ ನಿರುತ್ತರಾದರು. ಸ್ಟೀವ್ ಸ್ಮಿತ್ ರನೌಟ್ ಆದರೆ ಉಳಿದ ಎರಡು ವಿಕೆಟ್ ಗಳನ್ನು ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ಣೋಯ್ ಹಂಚಿಕೊಂಡರು.

ಕೊನೆಯ ಓವರ್ ನಲ್ಲಿ ಮುಕೇಶ್ ಕುಮಾರ್ ಕೊಂಚ ನಿಯಂತ್ರಣ ಸಾಧಿಸಿದ್ದು ಬಿಟ್ಟರೆ ಉಳಿದೆಲ್ಲಾ ಓವರ್ ಗಳಲ್ಲಿ ಆಸೀಸ್ ಬ್ಯಾಟಿಗರದ್ದೇ ಮೆರೆದಾಟ. ಇತ್ತೀಚೆಗಷ್ಟೇ ವಿಶ್ವಕಪ್ ಫೈನಲ್ ಸೋತಿದ್ದರಿಂದ ಅಭಿಮಾನಿಗಳೂ ಈ ಪಂದ್ಯ ವೀಕ್ಷಿಸಲು ಅಷ್ಟಾಗಿ ಆಸಕ್ತಿ ತೋರಿಸಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ