ಭಾರತ-ದ.ಆಫ್ರಿಕಾ ಕ್ರಿಕೆಟ್ ಗೆ ಇಂದಿನ ಪಂದ್ಯ ಸ್ಪೆಷಲ್ ಯಾಕೆ ಗೊತ್ತಾ?
ಈ ದಿನ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ 30 ವರ್ಷಗಳಾದ ಸಂಭ್ರಮ. ಈ ಸಂತೋಷದ ಗಳಿಗೆಯನ್ನು ದ.ಆಫ್ರಿಕಾ ಕ್ರಿಕೆಟ್ ಮಂಡಳಿ ವಿಶೇಷವಾಗಿ ಸಂಭ್ರಮಾಚರಿಸಲು ನಿರ್ಧರಿಸಿದೆ.
ಮೊದಲ ದಿನದಾಟಕ್ಕೆ ಮೊದಲು ಮೈದಾನ ಸಿಬ್ಬಂದಿಗಳಿಗೆ, ಮಾಜಿ ಆಟಗಾರರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಕ್ರಿಕೆಟ್ ಲೋಕಕ್ಕೆ ತಡವಾಗಿ ಕಾಲಿಟ್ಟ ದ.ಆಫ್ರಿಕಾಗೆ ಇದು ವಿಶೇಷ ಗಳಿಗೆಯಾಗಲಿದೆ.