ಭಾರತ-ದ.ಆಫ್ರಿಕಾ ಅಮೂಲ್ಯ ಸಮಯ ಹಾಳುಮಾಡಿದ ಮಳೆ

ಸೋಮವಾರ, 27 ಡಿಸೆಂಬರ್ 2021 (19:15 IST)
ಸೆಂಚೂರಿಯನ್: ಭಾರತ ಕ್ರಿಕೆಟ್ ತಂಡಕ್ಕೆ ಸದಾ ಮಳೆ ಶಾಪವಾಗಿಯೇ ಕಾಡುತ್ತದೆ. ಭಾರತ ಮತ್ತು ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿಯೂ ಅದೇ ನಡೆದಿದೆ.

ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ದ್ವಿತೀಯ ದಿನದ ಸಂಪೂರ್ಣ ಆಟ ಮಳೆಗೆ ಆಹುತಿಯಾಗಿದೆ. ನಿನ್ನೆಯ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.

ಆರಂಭಿಕ ಕೆಎಲ್ ರಾಹುಲ್ 122, ಅಜಿಂಕ್ಯಾ ರೆಹಾನೆ 40 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಇದರಿಂದಾಗಿ ಭಾರತ ಇಂದು ಬೃಹತ್ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ ಇಂದಿನ ದಿನದಾಟಕ್ಕೆ ವರುಣ ಅಡ್ಡಿಯಾಗಿದ್ದಾನೆ. ಇದರಿಂದಾಗಿ ಈ ಪಂದ್ಯದಲ್ಲಿ ಬೇಗನೇ ರನ್ ಬೃಹತ್ ಮೊತ್ತ ಗಳಿಸುವ ಒತ್ತಡದಲ್ಲಿ ಭಾರತವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ