ಭಾರತ-ಶ್ರೀಲಂಕಾ ಸರಣಿ ಪರಿಷ್ಕೃತ ವೇಳಾಪಟ್ಟಿ ತಿಳಿಸಿದ ಗಂಗೂಲಿ

ಭಾನುವಾರ, 11 ಜುಲೈ 2021 (09:20 IST)
ಮುಂಬೈ: ಭಾರತ ಮತ್ತು ಶ್ರೀಲಂಕಾ ನಡುವಿನ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿದೆ ಎಂಬ ಸುದ್ದಿ ಬಂದಿತ್ತು. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪರಿಷ್ಕೃತ ವೇಳಾಪಟ್ಟಿ ತಿಳಿಸಿದ್ದಾರೆ.


ಜುಲೈ 18 ರಿಂದ ಉಭಯ ದೇಶಗಳ ನಡುವಿನ ಸರಣಿ ಆರಂಭವಾಗಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಜುಲೈ 13 ಕ್ಕೆ ನಿಗದಿಯಾಗಿದ್ದ ಸರಣಿ ಐದು ದಿನ ಮುಂದೂಡಿಕೆಯಾಗಿದೆ.

ಜುಲೈ 18, 20 ಮತ್ತು 23 ರಂದು ಪ್ರೇಮದಾಸ ಸ್ಟೇಡಿಯಂನಲ್ಲಿ ಏಕದಿನ ಸರಣಿ ಮತ್ತು 25 ರಿಂದ ಟಿ 20 ಸರಣಿ ನಡೆಯಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಸದ್ಯಕ್ಕೆ ಭಾರತೀಯ ತಂಡದಲ್ಲಿ ಕೊರೋನಾ ಪ್ರಕರಣ ಕಂಡುಬಂದಿಲ್ಲ. ಆದರೆ ಲಂಕಾ ತಂಡದಲ್ಲಿ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ