ಜಸ್ಪ್ರೀತ್ ಬುಮ್ರಾಗೆ ಮತ್ತೆ ಗಾಯ: ಟಿ20 ವಿಶ್ವಕಪ್ ನಿಂದ ಹೊರಕ್ಕೆ?
ಬುಮ್ರಾ ಬೆನ್ನು ನೋವಿನಿಂದಾಗಿ ಏಷ್ಯಾ ಕಪ್ ನಿಂದ ಹೊರಗುಳಿದಿದ್ದರು. ಬಳಿಕ ಆಸ್ಟ್ರೇಲಿಯಾ ಟಿ20 ಸರಣಿ ವೇಳೆ ತಂಡಕ್ಕೆ ವಾಪಸಾಗಿದ್ದರು. ಈ ಸರಣಿಯಲ್ಲಿ ಎರಡು ಪಂದ್ಯಗಳನ್ನು ಬುಮ್ರಾ ಆಡಿದ್ದರು. ಇದೀಗ ಆಫ್ರಿಕಾ ಸರಣಿಗೆ ಆಯ್ಕೆಯಾಗಿದ್ದರೂ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ.
ಟಿ20 ವಿಶ್ವಕಪ್ ದೃಷ್ಟಿಯಿಂದ ಬುಮ್ರಾರನ್ನು ಮಹತ್ವದ ಪಂದ್ಯಗಳಲ್ಲಿ ಮಾತ್ರ ಆಡಿಸಲಾಗುತ್ತಿತ್ತು. ಆದರೆ ಇದೀಗ ಮತ್ತೆ ಅವಸರದಲ್ಲಿ ಕಣಕ್ಕಿಳಿದಿದ್ದೇ ಅವರಿಗೆ ಮತ್ತೆ ಬೆನ್ನು ನೋವು ಪುನರಾವರ್ತಿಸಲು ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಅವರೀಗ ಟಿ20 ವಿಶ್ವಕಪ್ ನಿಂದಲೇ ಹೊರಗುಳಿಯುವ ಪರಿಸ್ಥಿತಿಯಲ್ಲಿದ್ದಾರೆ.