ಪಿಚ್ ಗೆ ನುಗ್ಗಿದ ಅಭಿಮಾನಿಯನ್ನು ಹೊತ್ತೊಯ್ದು ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೇರ್ ಸ್ಟೋ!

ಬುಧವಾರ, 28 ಜೂನ್ 2023 (16:17 IST)
Photo Courtesy: Twitter

ಲಂಡನ್: ಕ್ರಿಕೆಟ್ ಪಂದ್ಯಗಳ ನಡುವೆ ಅಭಿಮಾನಿಗಳು ತಮ್ಮ ಮೆಚ್ಚಿನ ಕ್ರಿಕೆಟಿಗನ ಕೈಕುಲುಕಲು ಸೀದಾ ಮೈದಾನಕ್ಕೆ ನುಗ್ಗುವ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಅಂತಹದ್ದೇ ಒಂದು ಘಟನೆ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯಲ್ಲಿ ನಡೆಯದಿದೆ.

ಇಂಗ್ಲೆಂಡ್ ಫೀಲ್ಡಿಂಗ್ ಮಾಡುತ್ತಿದ್ದಾಗ ಪ್ರತಿಭಟನಾಕಾರನೊಬ್ಬ ನೇರವಾಗಿ ಮೈದಾನಕ್ಕೆ ಪ್ರವೇಶ ಮಾಡಿದ್ದಾನೆ. ಈತನನ್ನು ಸೆಕ್ಯುರಿಟಿ ಗಾರ್ಡ್ ಗಳು ತಡೆಯಲು ಯತ್ನಿಸಿದರೂ ಸಫಲವಾಗಿರಲಿಲ್ಲ.

ಹೀಗಾಗಿ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೇರ್ ಸ್ಟೋ ಆತನನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೌಂಡರಿ ಗೆರೆಯ ಹೊರಗೆ ಇಳಿಸಿದ್ದಾರೆ. ಬಳಿಕ ಭದ್ರತಾ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ