ಮೈದಾನದಲ್ಲಿ ಕಿತ್ತಾಡಿಕೊಂಡ ಕೊಹ್ಲಿ-ಜೋಸ್ ಬಟ್ಲರ್

ಭಾನುವಾರ, 21 ಮಾರ್ಚ್ 2021 (10:19 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ.


ಜೋಸ್ ಬಟ್ಲರ್ ಔಟಾಗಿ ಪೆವಿಲಿಯನ್ ಕಡೆಗೆ ಮರಳುವ ವೇಳೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಬಟ್ಲರ್ ಪೆವಿಲಿಯನ್ ಕಡೆಗೆ ತೆರಳುತ್ತಿದ್ದರೆ ಕೊಹ್ಲಿ ಏನನ್ನೋ ಹೇಳುತ್ತಾ ಅವರನ್ನೇ ಹಿಂಬಾಲಿಸುತ್ತಾರೆ. ಇಬ್ಬರೂ ಮಾತಿನ ಚಕಮಕಿ ನಡೆಸುತ್ತಿದ್ದಂತೆ ಅಂಪಾಯರ್ ಮಧ್ಯಪ್ರವೇಶಿಸಿ ತಿಳಿಗೊಳಿಸುತ್ತಾರೆ.

ಆದರೆ ಇಬ್ಬರ ನಡುವೆ ಯಾವ ವಿಚಾರಕ್ಕೆ ವಾಗ್ವಾದ ನಡೆಯಿತು ಎಂಬುದು ಬಹಿರಂಗವಾಗಿಲ್ಲ. ಹಾಗಿದ್ದರೂ ನೆಟ್ಟಿಗರು ಮಾತ್ರ ಇಬ್ಬರೂ ಆಟಗಾರರ ಕಾಲೆಳೆಯಲು ಮರೆತಿಲ್ಲ. ಒಬ್ಬರಂತೂ ರೋಹಿತ್ ಶರ್ಮಾನೇ ನಿಮಗಿಂತ ಬೆಸ್ಟ್ ಕ್ಯಾಪ್ಟನ್ ಎಂದು ಕೊಹ್ಲಿಗೆ ಬಟ್ಲರ್ ಹೇಳಿದ್ದಕ್ಕೇ ಈ ಜಗಳ ನಡೆಯಿತು ಎಂದು ತಮಾಷೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ