ಭಾರತ-ದ.ಆಫ್ರಿಕಾ ಟೆಸ್ಟ್: ಟೀಂ ಇಂಡಿಯಾಗೆ ಆಘಾತವಿಕ್ಕಿದ ರಬಾಡ

ಬುಧವಾರ, 5 ಜನವರಿ 2022 (16:11 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೂರನೇ ದಿನದಾಟದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ.

ಮೊದಲ ಇನಿಂಗ್ಸ್ ಹಿನ್ನಡೆ ಕಳೆದರೆ ಟೀಂ ಇಂಡಿಯಾ 166 ರನ್ ಗಳಿಸಿದಂತಾಗಿದೆ. ಇಂದಿನ ದಿನದಾಟದಲ್ಲಿ ಮೊದಲಾರ್ಧದಲ್ಲಿ ಚೇತೇಶ್ವರ ಪೂಜಾರ, ರೆಹಾನೆ ಅದ್ಭುತ ಆಟವಾಡಿದರು. ಇಬ್ಬರೂ ಅರ್ಧಶತಕ ಗಳಿಸಿದರು. ಪೂಜಾರ 53 ರನ್ ಗಳಿಸಿದರೆ ರೆಹಾನೆ 58 ರನ್ ಗಳಿಸಿದರು.

ಆದರೆ ಈ ಹಂತದಲ್ಲಿ ದಾಳಿಗಿಳಿದ ಕಗಿಸೊ ರಬಾಡ ರೆಹಾನೆ, ಪೂಜಾರ ಮತ್ತು ರಿಷಬ್ ಪಂತ್ ವಿಕೆಟ್ ನ್ನು ಬೆನ್ನು ಬೆನ್ನಿಗೆ ಕಿತ್ತು ಟೀಂ ಇಂಡಿಯಾ ಮುನ್ನಡೆಗೆ ಅಡ್ಡಿಯಾದರು. ರಿಷಬ್ ಪಂತ್ ಶೂನ್ಯಕ್ಕೆ ಔಟಾದರು. ಇದೀಗ 6 ರನ್ ಗಳಿಸಿರುವ ಹನುಮ ವಿಹಾರಿ ಮತ್ತು 4 ರನ್ ಗಳಿಸಿರುವ ಶ್ರಾದ್ಧೂಲ್ ಠಾಕೂರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮೊತ್ತವನ್ನು 200 ರ ಗಡಿ ದಾಟಿಸಿದರೆ ಭಾರತ ಕೊಂಚ ಮಟ್ಟಿಗೆ ಸುರಕ್ಷಿತವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ