ಬಾಲಂಗೋಚಿ ರಬಡಾನೂ ಟೀಂ ಇಂಡಿಯಾ ಪಾಲಿಗೆ ಕಬ್ಬಿಣದ ಕಡಲೆಯಾದರು!

ಗುರುವಾರ, 25 ಜನವರಿ 2018 (16:12 IST)
ಜೊಹಾನ್ಸ್ ಬರ್ಗ್: ಯಾವ ಪಿಚ್ ಆದರೇನು? ಯಾರು ಮೊದಲು ಬ್ಯಾಟ್ ಮಾಡಿದರೇನು? ಟೀಂ ಇಂಡಿಯಾ ಪರಿಸ್ಥಿತಿ ಬದಲಾಗದು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲೂ ಅದೇ ಆಗುತ್ತಿದೆ.
 

ಎರಡನೇ ದಿನ ಊಟದ ವಿರಾಮದ ವೇಳೆಗೆ ದ.ಆಫ್ರಿಕಾ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಟೀಂ ಇಂಡಿಯಾದ ಮೊದಲ ಇನಿಂಗ್ಸ್ ಮೊತ್ತ187 ರನ್ ದಾಟಲು ಅದಕ್ಕಿನ್ನು 106 ರನ್ ಗಳಿಸಿದರೆ ಸಾಕು.

ಸದ್ಯಕ್ಕೆ ಹಶೀಮ್ ಆಮ್ಲಾ ಅದ್ಭುತವಾಗಿ ಬ್ಯಾಟಿಂಗ್ (32) ಮಾಡುತ್ತಿದ್ದು ಅವರಿಗೆ ಎಬಿಡಿ ವಿಲಿಯರ್ಸ್ ಇನ್ನೂ ಖಾತೆ ತೆರೆಯದೇ ಸಾಥ್ ನೀಡುತ್ತಿದ್ದಾರೆ. ಆದರೆ ಇದಕ್ಕಿಂತ ಮೊದಲು ಟೀಂ ಇಂಡಿಯಾಗೆ ಕಾಡಿದ್ದು ನೈಟ್ ವಾಚ್ ಮನ್ ಆಗಿ ಬ್ಯಾಟ್ ಹಿಡಿದು ಬಂದ ಬೌಲರ್ ಕಗಿಸೋ ರಬಾಡಾ.

ರಬಾಡಾ ನಿನ್ನೆ ಸಂಜೆಯಿಂದ ಇಂದು ಊಟದ ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲವರೆಗೂ ತಾಳ್ಮೆಯಿಂದ ಬ್ಯಾಟ್ ಮಾಡುತ್ತಿದ್ದರು. 84 ಎಸೆತವನ್ನು ಆರಾಮವಾಗಿ ಎದುರಿಸಿ 30 ರನ್ ಗಳಿಸಿದ ರಬಾಡಾ ಇಶಾಂತ್ ಶರ್ಮಾ ಬಾಲ್ ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆದರೆ ಅವರು ಭಾರತೀಯ ಬೌಲರ್ ಗಳನ್ನು ಕಾಡಿಸಿದ ಬಗೆಗೆ ಅಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.

ಇದೀಗ ಆಫ್ರಿಕಾದ ಬೆಸ್ಟ್ ಜೋಡಿ ಕ್ರೀಸ್ ನಲ್ಲಿದ್ದು, ಟೀಂ ಇಂಡಿಯಾ ಬೌಲರ್ ಗಳಿಗೆ ಮತ್ತಷ್ಟು ತಲೆನೋವಾಗುವುದರಲ್ಲಿ ಸಂಶಯವಿಲ್ಲ. ಮುಂದಿನ ಅವಧಿಯ ಆಟದಲ್ಲಿ ಟೀಂ ಇಂಡಿಯಾ ಬೌಲರ್ ಗಳು ಆದಷ್ಟು ಬೇಗ ವಿಕೆಟ್ ಕೀಳದೇ ಇದ್ದರೆ, ವೈಟ್ ವಾಶ್ ಗ್ಯಾರಂಟಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ