Ranji Trophy: ರಣಜಿ ಟ್ರೋಫಿ ಫೈನಲ್ ಗೇರಿದ ಕರ್ನಾಟಕ: 11 ವರ್ಷಗಳ ಬಳಿಕ ಈ ಸಾಧನೆ

Krishnaveni K

ಗುರುವಾರ, 19 ಫೆಬ್ರವರಿ 2026 (16:50 IST)
Photo Credit: X
ಲಕ್ನೋ: ಕರ್ನಾಟಕ ಕ್ರಿಕೆಟ್ ತಂಡ ರಣಜಿ ಟ್ರೋಫಿ ಫೈನಲ್ ಗೇರಿದ್ದು ಬರೋಬ್ಬರಿ 11 ವರ್ಷಗಳ ಬಳಿಕ ಈ ಸಾಧನೆ ಮಾಡಿದೆ. ಕೊನೆಯ ಬಾರಿಗೆ 2014 ರಲ್ಲಿ ಕರ್ನಾಟಕ ಫೈನಲ್ ಗೇರಿತ್ತು.

ಉತ್ತರಾಖಂಡ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಮೊದಲ ಇನಿಂಗ್ಸ್ ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದ ಕಾರಣಕ್ಕೆ ಕರ್ನಾಟಕ ಫೈನಲ್ ಗೆ ಅರ್ಹತೆ ಪಡೆಯಿತು. ದ್ವಿತೀಯ ಇನಿಂಗ್ಸ್ ನಲ್ಲಿ 727 ರನ್ ಗಳ ಬೃಹತ್ ಮೊತ್ತದ ಗೆಲುವಿನ ಗುರಿ ಪಡೆದಿದ್ದ ಉತ್ತರಾಖಂಡ ಇಂದು ಕೊನೆಯ ದಿನ 6 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತ್ತು.

ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 736 ರನ್ ಗಳಿಸಿದ್ದರೆ ಎರಡನೇ ಇನಿಂಗ್ಸ್ ನಲ್ಲಿ 323 ರನ್ ಗಳಿಸಿತ್ತು. ಉತ್ತರಾಖಂಡ ಮೊದಲ ಇನಿಂಗ್ಸ್ ನಲ್ಲಿ 233 ರನ್ ಗಳಿಸಿತ್ತು. ಕರ್ನಾಟಕದ ಪರ ಮೊದಲ ಇನಿಂಗ್ಸ್ ನಲ್ಲಿ ದೇವದತ್ತ ಪಡಿಕ್ಕರ್ 232 ರನ್ ಗಳಿಸಿದ್ದರು. ಕೆಎಲ್ ರಾಹುಲ್ ಮೊದಲ ಇನಿಂಗ್ಸ್ ನಲ್ಲಿ 141 ಮತ್ತು ಎರಡನೇ ಇನಿಂಗ್ಸ್ ನಲ್ಲಿ ಅಜೇಯ 86 ರನ್ ಗಳಿಸಿದ್ದರು. ಇದರೊಂದಿಗೆ ಕರ್ನಾಟಕ ಈಗ ಫೈನಲ್ ನಲ್ಲಿ ಜಮ್ಮು ಕಾಶ್ಮೀರ ತಂಡವನ್ನು ಎದುರಿಸಲಿದೆ. ಜಮ್ಮು ಕಾಶ್ಮೀರ ನಿನ್ನೆಯಷ್ಟೇ ಬಂಗಾಳವನ್ನು ಶೋಲಿಸಿ ಫೈನಲ್ ಗೇರಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ