ಅಂಪಾಯರ್ ತೀರ್ಪಿಗೆ ಅಸಮಾಧನ ವ್ಯಕ್ತಪಡಿಸಿದ್ದಕ್ಕೆ ಕೆಎಲ್ ರಾಹುಲ್ ಗೆ ದಂಡ

ಭಾನುವಾರ, 5 ಸೆಪ್ಟಂಬರ್ 2021 (14:03 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ತಮ್ಮ ವಿರುದ್ಧ ನೀಡಲಾದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಕೆಎಲ್ ರಾಹುಲ್ ಗೆ ದಂಡ ವಿಧಿಸಲಾಗಿದೆ.


ಜೇಮ್ಸ್ ಆಂಡರ್ಸನ್ ಬೌಲಿಂಗ್ ನಲ್ಲಿ ರಾಹುಲ್ ಔಟಾಗಿದ್ದರು. ಫೀಲ್ಡ್ ಅಂಪಾಯರ್ ನಾಟೌಟ್ ಎಂದು ಘೋಷಿಸಿದಾಗ ಡಿಆರ್ ಎಸ್ ಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಥರ್ಡ್ ಅಂಪಾಯರ್ ರಾಹುಲ್ ಗೆ ಕ್ಯಾಚ್ ಔಟ್ ತೀರ್ಪು ನೀಡಿದರು. ಆದರೆ ಚೆಂಡು ತಮ್ಮ ಬ್ಯಾಟ್ ಮತ್ತು ಪ್ಯಾಡ್ ಗೆ ತಗುಲಿದ ಕಾರಣಕ್ಕೆ ಶಬ್ಧವಾಯಿತೇ ವಿನಹ ಚೆಂಡು ಬ್ಯಾಟ್ ಅಂಚಿಗೆ ತಗುಲಿ ಅಲ್ಲ ಎಂಬುದು ರಾಹುಲ್ ವಾದವಾಗಿತ್ತು.

ಇದಕ್ಕಾಗಿ ಅವರು ಅಂಪಾಯರ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಮೈದಾನದಿಂದ ಹೊರಹೋಗಿದ್ದರು. ಇದೀಗ ಐಸಿಸಿ ನಿಯಮಗಳ ಪ್ರಕಾರ ಅವರಿಗೆ ಮ್ಯಾಚ್ ಶುಲ್ಕದ ಶೇ.15 ರಷ್ಟು ಸಂಭಾವನೆಯನ್ನು ಕಡಿತಗೊಳಿಸಿ ದಂಡ ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ