ಶಿಖರ್ ಧವನ್ ವಿಶ್ವಕಪ್ ನಿಂದ ಔಟ್: ಕೆಎಲ್ ರಾಹುಲ್ ಗೆ ಛಾನ್ಸ್!

ಬುಧವಾರ, 12 ಜೂನ್ 2019 (08:57 IST)
ಲಂಡನ್: ಶಿಖರ್ ಧವನ್ ಗಾಯದಿಂದಾಗಿ ವಿಶ್ವಕಪ್ ತಂಡದಿಂದ ಹೊರಬೀಳುತ್ತಿದ್ದಂತೆ ಅವರ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಮುಂದಿನ ಪಂದ್ಯದಲ್ಲಿ ಆರಂಭಿಕರಾಗಿ ಆಡುವವರು ಯಾರು ಎಂಬ ಪ್ರಶ್ನೆ ಮೂಡಿದೆ.


ಉತ್ತಮ ಫಾರ್ಮ್ ನಲ್ಲಿದ್ದ ಧವನ್ ಬೆರಳಿನ ಗಾಯದಿಂದಾಗಿ ವಿಶ್ವಕಪ್ ನಿಂದ ಹೊರಬಿದಿದ್ದು ತಂಡಕ್ಕೆ ತುಂಬಲಾರದ ನಷ್ಟವೇ ಸರಿ. ಆದರೆ ಧವನ್ ಜಾಗದಲ್ಲಿ ಆರಂಭಿಕ ಸ್ಥಾನ ಕೆಎಲ್ ರಾಹುಲ್ ಪಾಲಾಗುವ ಸಾಧ್ಯತೆಯಿದೆ.

ಕನ್ನಡಿಗ ಬ್ಯಾಟ್ಸ್ ಮನ್ ಆರಂಭಿಕನಾಗಿ ಹೆಚ್ಚು ಯಶಸ್ಸು ಕಂಡರೂ ಈಗಾಗಲೇ ಆ ಸ್ಥಾನಕ್ಕೆ ಧವನ್-ರೋಹಿತ್ ಜೋಡಿ ಇರುವುದರಿಂದ ಅನಿವಾರ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿಯುತ್ತಿದ್ದರು. ಇದೀಗ ಧವನ್ ಹೊರಬಿದ್ದಿರುವುದರಿಂದ ರಾಹುಲ್ ಗೆ ಆರಂಭಿಕ ಸ್ಥಾನ ಸಿಗುವ ಸಾಧ್ಯತೆಯಿದ್ದು, ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ