ಕೋಲ್ಕೊತ್ತಾ ಹೊನಲು ಬೆಳಕು ಟೆಸ್ಟ್: ಪಿಂಕ್ ಸ್ವೀಟ್, ಪಿಂಕ್ ಸಿಟಿ!

ಶುಕ್ರವಾರ, 22 ನವೆಂಬರ್ 2019 (10:54 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಪಿಂಕ್ ಬಾಲ್ ಟೆಸ್ಟ್  ಇಂದಿನಿಂದ ಆರಂಭವಾಗಲಿದ್ದು, ಇದಕ್ಕೂ ಮೊದಲು ಇಡೀ ಕೋಲ್ಕೊತ್ತಾ ನಗರವೇ ಪಿಂಕ್ ಮಯವಾಗಿದೆ.


ಪಿಂಕ್ ಬಾಲ್ ಟೆಸ್ಟ್ ಗೆ ಮೊದಲು ಈಡನ್ ಗಾರ್ಡನ್ ಮೈದಾನದ ಸುತ್ತಮುತ್ತ ಪಿಂಕ್ ಬಣ್ಣದ ಲೈಟಿಂಗ್ಸ್ ಹಾಕಿ ಇಡೀ ನಗರವನ್ನೇ ಪಿಂಕ್ ಸಿಟಿಯನ್ನಾಗಿಸಲಾಗಿದೆ. ಅಲ್ಲದೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಿಂಕ್ ಬಣ್ಣದ ಬಾಲ್ ನ ಆಕಾರದ ಸಿಹಿ ತಿನಿಸಿನ ಫೋಟೋ ಒಂದನ್ನೂ ಬಿಡುಗಡೆ ಮಾಡಿದ್ದಾರೆ.

ಬೇಕರಿಗಳಲ್ಲಿ ಪಿಂಕ್ ಬಣ್ಣದ ಸ್ವೀಟ್ ತಯಾರಾಗಿವೆ. ನಗರದ ಪ್ರಮುಖ ಕಟ್ಟಡಗಳು, ಐತಿಹಾಸಿಕ ಸ್ಮಾರಕಗಳಿಗೆಲ್ಲಾ ಪಿಂಕ್ ಲೈಟಿಂಗ್ ಅಳವಡಿಸಲಾಗಿದೆ. ಒಟ್ಟಾರೆ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ