ನೆಲದ ಮೇಲೆ ಕುಳಿತು ಭೋಜನ ಹಂಚಿಕೊಂಡ ಧೋನಿ ಬಳಗ

ಶುಕ್ರವಾರ, 17 ಜೂನ್ 2016 (19:20 IST)
ಜಿಂಬಾಬ್ವೆಗೆ ತೆರಳಿದ ಟೀಂ ಇಂಡಿಯಾ ಪ್ರವಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಮಾತ್ರ ಹಿರಿಯ ಕ್ರಿಕೆಟಿಗರು.  ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಮಹಿ ಕಡಿಮೆ ಪ್ರಾಮುಖ್ಯತೆ ಪಡೆದಿದ್ದ ಈ ಸರಣಿಯಲ್ಲಿ ಆಡುವ ಅವಕಾಶದಿಂದ ತಪ್ಪಿಸಿಕೊಳ್ಳಲಿಲ್ಲ. ಯುವ ಆಟಗಾರರಿಗೆ ಇದು ಆಯ್ಕೆದಾರರನ್ನು ಮೆಚ್ಚಿಸುವುದಕ್ಕೆ ಮಾತ್ರವಲ್ಲದೇ ತಮ್ಮ ನಾಯಕನಿಂದ ಕೆಲವು ಕ್ರಿಕೆಟ್ ವರಸೆಗಳನ್ನು ಕಲಿಯಲು ಅವಕಾಶ ಕಲ್ಪಿಸಿದೆ. 
 
ಧೋನಿ ತಂಡದಲ್ಲಿ ಕ್ರೀಡಾಮನೋಭಾವ ನಿರ್ಮಾಣಕ್ಕೆ ಮತ್ತು ಮುಂದಿನ ಪೀಳಿಗೆಯ ಕ್ರಿಕೆಟಿಗರ ನಡುವೆ ಗಟ್ಟಿ ಬಾಂಧವ್ಯ ಬೆಸೆಯಲು ತಮ್ಮ ಅಲ್ಪಕಾಣಿಕೆ ನೀಡುತ್ತಿದ್ದಾರೆ. ಒಂದು ಸಂದರ್ಭದಲ್ಲಿ ತಮ್ಮ ತಂಡದ ಯುವ ಆಟಗಾರರ ಜತೆ ಭೋಜನದಲ್ಲೂ ಭಾಗಿಯಾಗಿದ್ದರು.  ಧೋನಿ ಮತ್ತು  ಮಿಲಿಯಾಧಿಪತಿ ಸೂಪರ್ ಸ್ಟಾರ್ ಭಾರತೀಯ ಕ್ರಿಕೆಟಿಗರು ತಮ್ಮ ಹೊಟೆಲ್ ಕೋಣೆಯಲ್ಲಿ ನೆಲದ ಮೇಲೆ ಕುಳಿತು ಭೋಜನ ಹಂಚಿಕೊಂಡು ತಿನ್ನುವುದನ್ನು ನೋಡುವುದು ಅಪೂರ್ವ ದೃಶ್ಯವಾಗಿತ್ತು.

ಇದೊಂದು ತಂಡದಲ್ಲಿ ಭಾವೈಕ್ಯತೆ ಮೂಡಲು, ಸಹಕಾರ ಮನೋಭಾವ ಬೆಳೆಯಲು ಸಹಾಯಕವಾಗಿತ್ತು. ದೇಶದ ಹೊರಗೆ ಕ್ರಿಕೆಟ್ ಆಡುವುದರಿಂದ ಭಾರತದಲ್ಲಿ ಮಾಡಲು ಸಾಧ್ಯವಾಗದ ಕೆಲಸಗಳಿಗೆ ವಿದೇಶದಲ್ಲಿ ಆಗಾಗ್ಗೆ ಅವಕಾಶ ಕಲ್ಪಿಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ