ಕಾಯಿಸಿದವರಿಗೆ ತಕ್ಕ ಉತ್ತರ ನೀಡಿದ ಮಯಾಂಕ್ ಅಗರ್ವಾಲ್

ಶುಕ್ರವಾರ, 4 ಅಕ್ಟೋಬರ್ 2019 (09:07 IST)
ವಿಶಾಖಪಟ್ಟಣ: ಪ್ರತಿಭೆಯಿದ್ದರೂ, ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ರನ್ ಗಳಿಸಿದ್ದರೂ ಕನ್ನಡಿಗ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಗೆ ಟೀಂ ಇಂಡಿಯಾ ಬಾಗಿಲು ತೆರೆದಿರಲೇ ಇಲ್ಲ. ಒಂದೊಮ್ಮೆ ಆಯ್ಕೆಗಾರರೇ ಸ್ವಲ್ಪ ದಿನ ಕಾದಿರು ಎಂದು ಕಡೆಗಣಿಸಿದ್ದರು. ಇಂದು ಅದೇ ಮಯಾಂಕ್ ಅವಕಾಶ ಕೊಟ್ಟಾಗ ಅದನ್ನು ಸರಿಯಾಗಿ ಬಳಸಿಕೊಂಡು ಕಾಯಿಸಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.


ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮಯಾಂಕ್ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ. ಮಯಾಂಕ್ ಮತ್ತು ರೋಹಿತ್ ಶರ್ಮಾ (176) ಅಮೋಘ ಆಟದಿಂದಾಗಿ ಭಾರತ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 502 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು ಉತ್ತರವಾಗಿ ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿ ಸಂಕಷ್ಟದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ