ಕೊಹ್ಲಿಯ ಮತ್ತೊಂದು ರೂಪ ಮೊಹಮ್ಮದ್ ಸಿರಾಜ್
ಕೊಹ್ಲಿಯಂತೇ ಆಕ್ರಮಣಕಾರಿ ವರ್ತನೆ ತೋರುವ ಸಿರಾಜ್ ಎರಡೆರಡು ಬಾರಿ ಎದುರಾಳಿ ಆಟಗಾರರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಒಮ್ಮೆ ಜೇಮ್ಸ್ ಆಂಡರ್ಸನ್ ಜೊತೆ ಮಾತಿನ ಚಕಮಕಿ ನಡೆಸಿ ಭುಜಕ್ಕೆ ಭುಜ ತಾಗಿಸುವ ಮಟ್ಟಕ್ಕೆ ಹೋದರೆ ಮತ್ತೊಮ್ಮೆ ಬೌಲಿಂಗ್ ಮಾಡುವಾಗ ಎದುರಾಳಿ ಬ್ಯಾಟ್ಸ್ ಮನ್ ಸ್ಯಾಮ್ ಕ್ಯುರೇನ್ ಜೊತೆಗೆ ಮಾತಿನ ಚಕಮಕಿ ನಡೆಸಿದರು. ವಿಶೇಷವೆಂದರೆ ಈ ವೇಳೆ ಕೊಹ್ಲಿ ಅವರನ್ನು ಸಮಾಧಾನ ಪಡಿಸಬೇಕಾಯಿತು. ಈ ಮೂಲಕ ವಿಕೆಟ್ ಬಿದ್ದಾಗಲೂ, ಉತ್ತಮ ಬೌಲಿಂಗ್ ನಡೆಸಿದಾಗಲೂ ಅವರು ಆಕ್ರಮಣಕಾರಿಯಾಗಿ ವರ್ತಿಸುವುದನ್ನು ನೋಡಿದರೆ ಕೊಹ್ಲಿಗೆ ಮತ್ತೊಬ್ಬ ಸ್ಪರ್ಧಿ ಎನ್ನಬಹುದು.