ವಿಶ್ವಕಪ್ ರನ್ನರ್ ಅಪ್ ಭಾರತ ಮಹಿಳಾ ಕ್ರಿಕೆಟಿಗರನ್ನು ಸ್ವಾಗತಿಸಲು ಯಾರೂ ಇಲ್ಲ!

ಶುಕ್ರವಾರ, 13 ಮಾರ್ಚ್ 2020 (09:10 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಫೈನಲ್ ನಲ್ಲಿ ಸೋತು ತಾಯ್ನಾಡಿಗೆ ಮರಳಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ಯಾರೂ ಇಲ್ಲದೇ ಹೋಗಿದ್ದು ವಿಪರ್ಯಾಸವೇ ಸರಿ.


ರನ್ನರ್ ಅಪ್ ಆಗಿದ್ದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಆಟಗಾರ್ತಿಯರು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಔಪಚಾರಿಕತೆಗಾದರೂ ಬಿಸಿಸಿಐನ ಯಾವುದೇ ಅಧಿಕಾರಿಯೂ ಸ್ಥಳದಲ್ಲಿ ಇಲ್ಲದೇ ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

ಕೇವಲ ಪುರುಷರ ಕ್ರಿಕೆಟಿಗರನ್ನು ಮಾತ್ರ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹಲವರು ದೂರುವುದಕ್ಕೂ ಬಿಸಿಸಿಐ ನಡೆದುಕೊಳ್ಳುವುದಕ್ಕೂ ಸರಿಯಾಗಿಯೇ ಇದೆ. ಅದೂ ಅಲ್ಲದೆ, ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದ ಭಾರತಕ್ಕೆ ಬಿಸಿಸಿಐ ಇದುವರೆಗೆ ಬಹುಮಾನ ಹಣವನ್ನೂ ಘೋಷಿಸದೇ ಇರುವುದು ಖೇದಕರ ಸಂಗತಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ