ವಿದೇಶಿ ತಂಡಗಳ ಮನವೊಲಿಕೆಗೆ ಪಾಕ್‌ನಿಂದ ನಾಲ್ಕು ಬುಲೆಟ್ ಪ್ರೂಫ್ ಬಸ್ ಖರೀದಿ

ಶುಕ್ರವಾರ, 15 ಜುಲೈ 2016 (12:44 IST)
ಪ್ರವಾಸಿ ತಂಡಗಳು ಪಾಕ್‌ನಲ್ಲಿರುವ ಭದ್ರತಾ ಶಂಕೆಗಳನ್ನು ನಿವಾರಿಸಿಕೊಂಡು ದೇಶಕ್ಕೆ ಭೇಟಿ ನೀಡುವಂತೆ ಮನವೊಲಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 4 ಗುಂಡು ನಿರೋಧಕ ಬಸ್‌‌ಗಳನ್ನು ಖರೀದಿಸಿದೆ. 2009ರಲ್ಲಿ ಬಂದೂಕುಧಾರಿಗಳು ಶ್ರೀಲಂಕಾ ಕ್ರಿಕೆಟರುಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ದಾಳಿ ಮಾಡಿದಾಗಿನಿಂದ ಪ್ರವಾಸಿ ತಂಡಗಳು ಅಲ್ಲಿಗೆ ಭೇಟಿ ನೀಡುವುದನ್ನು ನಿಲ್ಲಿಸಿದೆ.

ಈ ದಾಳಿಯಲ್ಲಿ 6 ಆಟಗಾರರು, 6 ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದರು. ಈ ಘಟನೆಯಿಂದ ಪಾಕಿಸ್ತಾನ ತನ್ನ ಸ್ವದೇಶಿ ಪಂದ್ಯಗಳನ್ನು ಯುಎಇನಲ್ಲಿ ಮಾತ್ರ ನಡೆಸಿದ್ದು, ಸ್ವದೇಶದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕಾಣದೇ ದೇಶದ ಕ್ರಿಕೆಟ್ ಸೊರಗಿಹೋಗಿತ್ತು.
 
ಆದ್ದರಿಂದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪುನಶ್ಚೇತನ ನೀಡಲು ನಾವು ನಾಲ್ಕು ಕೋಸ್ಟರ್‌ ಬಸ್‌ಗಳನ್ನು ಖರೀದಿಸಿದ್ದೇವೆ ಎಂದು ಪಿಸಿಬಿ ವಕ್ತಾರ ತಿಳಿಸಿದರು.
 
ಪಾಕಿಸ್ತಾನಕ್ಕೆ ಭೇಟಿ ನೀಡುವ ತಂಡಗಳು ಅತಿಯಾದ ನಿರೀಕ್ಷೆಗಳನ್ನು ಹೊಂದಿದ್ದು, ನಾವು ಅವರಿಗೆ ಸಾಧ್ಯವಾದ ವ್ಯವಸ್ಥೆಗಳನ್ನು ಒದಗಿಸುವುದಾಗಿ ಖಾತರಿ ನೀಡುತ್ತೇವೆಂದು ವಕ್ತಾರ ತಿಳಿಸಿದರು.
 
 ಬುಲೆಟ್ ಫ್ರೂಫ್ ವಾಹನಗಳು ತಂಡಗಳ ಮನವೊಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು. ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲು ಪಿಸಿಬಿ ಬಯಸಿದೆ. ನಾವು ವಿದೇಶಿ ಆಟಗಾರರ ಸುರಕ್ಷತೆ ಮತ್ತು ಭದ್ರತೆ ಕುರಿತು ಚರ್ಚೆ ನಡೆಸಿದ್ದು, ನಮ್ಮ ಅಂತಿಮ ಗುರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚೇತರಿಕೆ ನೀಡುವುದಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ