ವಿರಾಟ್ ಕೊಹ್ಲಿಯನ್ನೇ ತಳ್ಳಿ ಮುನ್ನುಗ್ಗಿದ ಪೃಥ್ವಿ ಶಾ

ಭಾನುವಾರ, 30 ಡಿಸೆಂಬರ್ 2018 (06:26 IST)
ಮುಂಬೈ: ಈ ವರ್ಷದ ಭಾರತದ ಯಶಸ್ವೀ ಕ್ರಿಕೆಟಿಗ ಯಾರು ಎಂದರೆ ಎಲ್ಲರೂ ಹೇಳುವುದು ವಿರಾಟ್ ಕೊಹ್ಲಿ ಹೆಸರನ್ನೇ. ರನ್ ಗಳಿಸಿದ್ದನ್ನು ನೋಡಿದರೆ ಕೊಹ್ಲಿ ಎಂಬುದರಲ್ಲಿ ಸಂಶಯವಿಲ್ಲ.


ಆದರೆ ಈ ವರ್ಷ ಗರಿಷ್ಠ ರನ್ ಸರಾಸರಿ ಹೊಂದಿದ ಕ್ರಿಕೆಟಿಗ ಎಂಬ ವಿಚಾರದಲ್ಲಿ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ತಮ್ಮ ನಾಯಕ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ.

2018 ನೇ ಸಾಲಿನ ಗರಿಷ್ಠ ರನ್ ಸರಾಸರಿ ಹೊಂದಿದ ಕ್ರಿಕೆಟಿಗರ ಪೈಕಿ ಕೊಹ್ಲಿ 55.08 ರನ್ ಸರಾಸರಿಯೊಂದಿಗೆ 12 ನೇ ಸ್ಥಾನದಲ್ಲಿದ್ದಾರೆ. ಆದರೆ ಕೇವಲ 2 ಟೆಸ್ಟ್ ಪಂದ್ಯವಾಡಿರುವ ಪೃಥ್ವಿ ಶಾ  118.50 ಸರಾಸರಿಯಲ್ಲಿ 237 ರನ್ ಗಳಿಸಿದ್ದು ಅಗ್ರ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಿರುವ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಕೂಡಾ (59.00) ಕೊಹ್ಲಿಗಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ.

ಗರಿಷ್ಠ ರನ್ ಸರಾಸರಿ ಪಟ್ಟಿಯಲ್ಲಿ ಪೃಥ್ವಿ ಶಾ ನಂತರದ ಸ್ಥಾನ ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಅವರದ್ದು. ನ್ಯೂಜಿಲೆಂಡ್ ನ ಕೆವಿನ್ ಓಬ್ರಿಯಾನ್ ಗೆ ಮೂರನೇ ಸ್ಥಾನ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ