ಭಾರತ-ನ್ಯೂಜಿಲೆಂಡ್ ಟಿ20 ಅಂತಿಮ ಪಂದ್ಯ ನಡೆಯೋದೇ ಡೌಟು!
29 ವರ್ಷಗಳ ಬಳಿಕ ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಆದರೆ ಮಳೆ ಎಲ್ಲದಕ್ಕೂ ತಣ್ಣೀರೆರಚದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ. ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದ್ದು, ಒಂದು ವೇಳೆ ಮಳೆಬಂದರೂ 15 ನಿಮಿಷದಲ್ಲಿ ಮೈದಾನ ಸಿದ್ಧಗೊಳಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೊಂಡಿದೆ. ಆದರೆ ಅದು ಎಷ್ಟು ನಿಜವಾಗುತ್ತದೆ ಕಾದು ನೋಡಬೇಕು.