ರಣಜಿ ಟ್ರೋಫಿ ಕ್ರಿಕೆಟ್: ಕರ್ನಟಕಕ್ಕೆ ಜಯದ ಕನಸು

ಶನಿವಾರ, 9 ಡಿಸೆಂಬರ್ 2017 (12:06 IST)
ನಾಗ್ಪುರ: ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ ಭೋಜನ ವಿರಾಮದ ವೇಳೆಗೆ 9 ವಿಕೆಟ್ ನಷ್ಟಕ್ಕೆ 563 ರನ್ ಗಳಿಸಿದ್ದು, 390 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ.
 

ಇದರಿಂದಾಗಿ ಬಲಿಷ್ಠ ಮುಂಬೈ ವಿರುದ್ಧ ಕರ್ನಾಟಕ ಗೆಲುವಿನ ಉತ್ಸಾಹದಲ್ಲಿದೆ. ನಿನ್ನೆ ನಾಟೌಟ್ ಆಗಿ ಉಳಿದಿದ್ದ ಕರ್ನಾಟಕದ ನಾಯಕ ವಿನಯ್ ಕುಮಾರ್ ಇಂದು ಮತ್ತೆ 5 ರನ್ ಸೇರಿಸಿ ಔಟಾದರು. ನಿನ್ನೆ ಅರ್ಧಶತಕ ಗಳಿಸಿ ಅಜೇಯರಾಗಿದ್ದ ಶ್ರೇಯಸ್ ಗೋಪಾಲ್ ಇಂದು ಶತಕ ಗಳಿಸಿ (147 ನಾಟೌಟ್) ಮೆರೆದರು.

ಇವರ ಅದ್ಭುತ ಆಟದಿಂದಾಗಿ ಕರ್ನಾಟಕಕ್ಕೆ  ಮಹತ್ವದ ಮುನ್ನಡೆ ದೊರಕಿತು. ಮುಂಬೈ ಪರ ಧವಳ್ ಕುಲಕರ್ಣಿ ಎರಡು ಎಸೆತದಲ್ಲಿ ಎರಡು ವಿಕೆಟ್ ಬಲಿ ಪಡೆದು ಕರ್ನಾಟಕಕ್ಕೆ ಆಘಾತವಿಕ್ಕಿದರು. ಆದರೂ ಹ್ಯಾಟ್ರಿಕ್ ಗಳಿಸುವ ಅವರ ಕನಸು ನನಸಾಗಲಿಲ್ಲ. ನಂತರ ಬಂದ ಶ್ರೀನಾಥ್ ಅರವಿಂದ್ 51 ರನ್ ಗಳಿಸಿ ಕೊನೆಯ ವಿಕೆಟ್ ಗೆ ಇದುವರೆಗೆ 85 ರನ್ ಗಳ ಜತೆಯಾಟವಾಟವಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ