Ranji Trophy Final: ರಣಜಿ ಫೈನಲ್ ನಲ್ಲಿ ಕೈಕೊಟ್ಟ ಬಿಗ್ ಥ್ರೀ: ಜಮ್ಮು ಎದುರು ಕರ್ನಾಟಕ ಹಳಿ ತಪ್ಪಿದ ರೈಲು

Krishnaveni K

ಗುರುವಾರ, 26 ಫೆಬ್ರವರಿ 2026 (13:56 IST)
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ನಲ್ಲಿ ಬೌಲಿಂಗ್ ಬಳಿಕ ಬ್ಯಾಟಿಂಗ್ ಕೂಡಾ ಕರ್ನಾಟಕಕ್ಕೆ ಕೈ ಕೊಟ್ಟಿದೆ. ಕರ್ನಾಟಕದ ಮೂರು ಬಿಗ್ ಬ್ಯಾಟಿಗರು ಕನಿಷ್ಠ ಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಜಮ್ಮು ಕಾಶ್ಮೀರ ಎರಡು ದಿನ ಬ್ಯಾಟಿಂಗ್ ಮಾಡಿ ಬರೋಬ್ಬರಿ 584 ರನ್ ಗಳಿಸಿತ್ತು. ಈ ಬೃಹತ್ ಬೆನ್ನತ್ತಿರುವ ಕರ್ನಾಟಕಕ್ಕೆ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್ ಕೈ ಕೊಟ್ಟಿದ್ದಾರೆ. ಕರ್ನಾಟಕವನ್ನು ಕ್ವಾರ್ಟರ್ ಫೈನಲ್, ಸೆಮಿಫೈನಲ್ ನಲ್ಲಿ ಶತಕ ಸಿಡಿಸಿ ಕಾಪಾಡಿದ್ದ ರಾಹುಲ್ 13 ರನ್ ಗೆ ಆಖಿಬ್ ನಬಿಗೆ ವಿಕೆಟ್ ಒಪ್ಪಿಸಿದ್ದಾರೆ.

ಇನ್ನು, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ದೇವದತ್ತ ಪಡಿಕ್ಕಲ್ 11 ರನ್ ಗೆ ಪೆವಿಲಿಯನ್ ಗೆ ಮರಳಿದ್ದಾರೆ. ಇನ್ನೊಬ್ಬ ಅನುಭವಿ ಆಟಗಾರ ಕರುಣ್ ನಾಯರ್ ಸೊನ್ನೆ ಸುತ್ತಿದ್ದಾರೆ. ಅವರ ಜೊತೆಗೆ ಸಮರನ್ ರವಿಚಂದ್ರನ್ ಕೂಡಾ ಶೂನ್ಯಕ್ಕೆ ನಿರ್ಗಮಿಸಿದ್ದು ಕರ್ನಾಟಕಕ್ಕೆ ದೊಡ್ಡ ಹೊಡೆತ ನೀಡಿದೆ.

ಇತ್ತೀಚೆಗಿನ ವರದಿ ಬಂದಾಗ ಕರ್ನಾಟಕ ಮಯಾಂಕ್ ಅಗರ್ವಾಲ್ 48, ಶ್ರೇಯಸ್ ಗೋಪಾಲ್ 8 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕರ್ನಾಟಕ 4 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿ ಒದ್ದಾಡುತ್ತಿದೆ. ಜಮ್ಮು ಮೊದಲ ಇನಿಂಗ್ಸ್ ಮೊತ್ತ ದಾಟಲು ಕರ್ನಾಟಕ ಇನ್ನೂ 498 ರನ್ ಗಳ ದೊಡ್ಡ ಬೆಟ್ಟವನ್ನೇ ದಾಟಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ