ಕಪಿಲ್ ದಾಖಲೆ ಮುರಿದ ಅಶ್ವಿನ್, ಇತಿಹಾಸ ಬರೆದ ಜಡೇಜಾ
ಮೊದಲ ಇನಿಂಗ್ಸ್ ನಲ್ಲಿ 175 ರನ್ ಗಳಿಸಿ ಅಜೇಯರಾಗುಳಿದಿದ್ದ ಜಡೇಜಾ ಬಳಿಕ 5 ವಿಕೆಟ್ ಕೂಡಾ ಕಬಳಿಸಿದರು. ಬಳಿಕ ದ್ವಿತೀಯ ಇನಿಂಗ್ಸ್ ನಲ್ಲೂ ಜಡೇಜಾ 4 ವಿಕೆಟ್ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲಿ 150 ಪ್ಲಸ್ ರನ್ ಮತ್ತು ಐದು ವಿಕೆಟ್ ಗಳ ಗೊಂಚಲು ಪಡೆದ ಆರನೇ ಕ್ರಿಕೆಟರ್ ಎಂಬ ಇತಿಹಾಸ ಬರೆದರು.
ಇನ್ನು, ರವಿಚಂದ್ರನ್ ಅಶ್ವಿನ್ ಈ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಪಡೆದಿದ್ದು, ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಕಪಿಲ್ ದೇವ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈಗ ಅಶ್ವಿನ್ 435 ವಿಕೆಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದವರಾಗಿದ್ದಾರೆ.