ಅಭಿಮಾನಿಗಳಿಗೆ ಪತ್ರ ಬರೆದ ರೋಹಿತ್ ಶರ್ಮಾ
ಈ ಹಿನ್ನಲೆಯಲ್ಲಿ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದ ಮೂಲಕ ಪತ್ರ ಬರೆದು ಅಭಿಮಾನಿಗಳಿಗೆ ಭಾವುಕ ಸಂದೇಶ ನೀಡಿದ್ದಾರೆ.
ಇಂದಿಗೆ ನನ್ನ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ 15 ವರ್ಷಗಳಾಗಿವೆ. ಇದುವರೆಗಿನ ಪ್ರಯಾಣ ಅದ್ಭುತವಾಗಿತ್ತು. ಅದನ್ನು ನಾನು ಜೀವನ ಪೂರ್ತಿ ಮೆಲುಕು ಹಾಕುತ್ತಿರುವೆ. ನನ್ನ ಪಯಣದಲ್ಲಿ ಜೊತೆಯಾದ ಎಲ್ಲರಿಗೂ, ನನ್ನನ್ನು ಒಬ್ಬ ಕ್ರಿಕೆಟಿಗನಾಗಿ ರೂಪಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಲ್ಲದೆ,ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸಿ, ಪ್ರೀತಿಸುವ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ರೋಹಿತ್ ಸಂದೇಶ ಬರೆದಿದ್ದಾರೆ.