ಟೀಂ ಇಂಡಿಯಾ ನಾಯಕರಾಗಿ ಮಿಂಚಿದ ರೋಹಿತ್ ಶರ್ಮಾರಿಂದ ವಿರಾಟ್ ಕೊಹ್ಲಿಗೆ ಎದುರಾಗಿದೆ ಆಪತ್ತು

ಗುರುವಾರ, 15 ನವೆಂಬರ್ 2018 (09:26 IST)
ಮುಂಬೈ: ತಮಗೆ ಏಷ್ಯಾ ಕಪ್, ವಿಂಡೀಸ್ ಟಿ20 ಸರಣಿ ಗೆಲುವಿನ ಬಳಿಕ ಇದೀಗ ಟೀಂ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆಗೆ ಸಣ್ಣದೊಂದು ಒತ್ತಡ ಹೆಚ್ಚಾಗಿದೆ.

ರೋಹಿತ್ ಶರ್ಮಾರ ತಾಳ್ಮೆಯ ನಾಯಕತ್ವಕ್ಕೂ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಸ್ವಭಾವಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ರೋಹಿತ್ ನಾಯಕರಾಗಿ ಮಿಂಚುತ್ತಿರುವುದು ನೋಡಿ ಮಾಜಿಗಳು ಅವರ ಪರ ಪರೋಕ್ಷ ಬ್ಯಾಟಿಂಗ್ ಮಾಡಲು ಶುರು ಮಾಡಿದ್ದಾರೆ.

ಇದು ವಿರಾಟ್ ಕೊಹ್ಲಿಗೆ ಅಪಾಯದ ಕರೆ ಗಂಟೆಯೇ ಸರಿ. ಧೋನಿಯ ತಾಳ್ಮೆಯನ್ನು ಮೈಗೂಡಿಸಿಕೊಂಡಿರುವ ರೋಹಿತ್ ಒತ್ತಡದಲ್ಲೂ ತಾಳ್ಮೆ ಕಳೆದುಕೊಳ್ಳದ ಪರಿ ನೋಡಿ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಮಾಜಿ ದಿಗ್ಗಜ ಕ್ರಿಕೆಟಿಗರು ಅವರ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ ವಿದೇಶಗಳಲ್ಲಿ ವಿಫಲವಾಗುತ್ತಿರುವುದರಿಂದ ರೋಹಿತ್ ರನ್ನೇ ಟಿ20 ಪಂದ್ಯಗಳಿಗೆ ಖಾಯಂ ನಾಯಕನಾಗಿಸಬಹುದು ಎಂಬ ಒತ್ತಾಯಗಳು ಕೇಳಿರಬರತೊಡಗಿವೆ. ಇದರಿಂದ ಕೊಹ್ಲಿಗೂ ಕೊಂಚ ಒತ್ತಡ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

ಇದುವರೆಗೆ ಕೊಹ್ಲಿ ಟೀಂ ಇಂಡಿಯಾದಲ್ಲಿ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಆದರೆ ಈಗ ನಾಯಕತ್ವ, ಬ್ಯಾಟಿಂಗ್ ನಲ್ಲಿ ರೋಹಿತ್ ಮಿಂಚುತ್ತಿರುವುದರಿಂದ ಹೊಸದೊಂದು ಸ್ಪರ್ಧಿ ಹುಟ್ಟಿಕೊಂಡಿದ್ದಾರೆ. ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ