ಮದುವೆಯಾಗ್ತೀಯಾ? ರೋಹಿತ್ ಶರ್ಮಾ ಬೇಡಿಕೆಗೆ ಬೇಸ್ತು ಬಿದ್ದ ಅಭಿಮಾನಿ

ಸೋಮವಾರ, 20 ಮಾರ್ಚ್ 2023 (09:00 IST)
ವಿಶಾಖಪಟ್ಟಣ: ರೋಹಿತ್ ಶರ್ಮಾ ಹಾಸ್ಯ ಪ್ರವೃತ್ತಿಯುಳ್ಳವರು ಎಂಬುದು ಅವರ ಅಭಿಮಾನಿಗಳಿಗೆಲ್ಲಾ ಗೊತ್ತೇ ಇದೆ. ಅವರು ತಮ್ಮ ಅಭಿಮಾನಿಗಳಿಗೂ ಹಲವು ಬಾರಿ ಚಮಕ್ ನೀಡಿದ್ದಿದೆ.

ಇದೀಗ ಅಂತಹದ್ದೇ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರೋಹಿತ್ ಟೀಂ ಇಂಡಿಯಾ ಜೊತೆ ವಿಮಾನ ನಿಲ್ದಾಣದಲ್ಲಿ ನಡೆದುಕೊಂಡು ಬರುತ್ತಿರುವ ಅಭಿಮಾನಿಯೊಬ್ಬ ಅವರ ಎದುರಿಗೆ ನಿಂತು ಸೆಲ್ಫೀ ವಿಡಿಯೋ ಮಾಡುತ್ತಿದ್ದ.

ಇದನ್ನು ಗಮನಿಸಿದ ರೋಹಿತ್ ಅಭಿಮಾನಿಯ ಬಳಿ ಬಂದು ನನ್ನ ಮದುವೆಯಾಗ್ತೀಯಾ? ಎಂದು ಕಾಲೆಳೆದು ಮುಂದೆ ಸಾಗಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರ ಹಾಸ್ಯ ಪ್ರವೃತ್ತಿಯನ್ನು ಮೆಚ್ಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ